ವಾರಿಯರ್ಸ್‍ಗಳು ಕಾರ್ಯ ಶ್ಲ್ಯಾಘನೀಯ- ಪಾಟೀಲ


ಧಾರವಾಡ,ಜೂ.4: ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆಗೆ ನಿಂತ ಕೊರೋನಾ ಫ್ರಂಟ್‍ಲೈನ್ ವಾರಿಯರಸ್ರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಉಗಾರ ಬಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ(ಅಣ್ಣಾಗೌಡ) ಪಾಟೀಲ ಹೇಳಿದರು.
ಅವರು ಗುರುವಾರ ಉಗಾರ ಬಿ.ಕೆ ಗ್ರಾಮ ಪಂಚಾಯತಿ ವತಿಯಿಂದ ಆಶಾ ಕಾರ್ಯಕರ್ತೆಯರು ಪ್ರತಿ ಮನೆಮನೆಗಳಿಗೆ ಹೋಗಿ ಜನರ ಆರೋಗ್ಯ ಮತ್ತು ಕೋವಿಡ್ ತಪಾಸನೆಗೆ ಆಶಾ ಕಾರ್ಯಕರ್ತೆಯರಿಗೆ ಟೆಂಪ್ರೆಚರ ಹಾಗೂ ಆಕ್ಸಿಜನ್ ಮೀಟರಗಳನ್ನು ವಿತರಿಸಿ ಮಾತನಾಡಿದ ಅವರು ಕೋವಿಡ್‍ನಂತ ತುರ್ತು ಸಂದರ್ಭದಲ್ಲಿ ವೈದ್ಯರು, ಪೆÇಲೀಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಂಚಾಯತ್ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಲು ಹೋರಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಉಗಾರ ಬಿ.ಕೆ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಮನೆಗಳಿಗೆ ಬಂದಾಗ ಸಹಕಾರ ನೀಡಿ ನಿಮ್ಮ ಆರೋಗ್ಯ ತಪಾಸನೆ ಮಾಡಿಸಿಕೊಳ್ಳಬೇಕು. ಏಕೆಂದರೆ ಅವರು ತಮ್ಮ ಜೀವದ ಹಂಗು ತೊರೆದು ನಿಮ್ಮ ಆರೋಗ್ಯ ಕಾಪಾಡಲು ಬಂದಿರುತ್ತಾರೆ, ಅವರಿಗೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರು ತಪಾಸನೆ ಮಾಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷ ಭುಜಗೌಡ(ಅಣ್ಣಾಗೌಡ) ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬು ಐತವಾಡೆ, ಸದಸ್ಯರಾದ ಅಪ್ಪಾಸಾಬ ಚೌಗುಲೆ, ,ವಿನಾಯಕ ಶಿಂಧೆ,ವಿಜಯ ಶಿಂಧೆ,ಗ್ರಾಮ ಪಂಚಾಯತ್ ಶಿಬ್ಬಂದಿಗಳಾದ ಭರತ ಗದಾಳೆ, ಆನಂದ ವಂಟಗೂಡೆ, ಪ್ರಾತಾಪ ರಫಹಿದಾಸ, ಅಸ್ಲಂ ಮಾಂಜರೆ, ವಿವೇಕ ಕಾಂಬಳೆ ಸೇರಿದಂತೆ ಅನೇಕರು ಇದ್ದರು.