ವಾರಿಯರ್ಸ್‍ಗಳಿಗೆ ಇಮ್ಯುನಿಟಿ ಬೂಸ್ಟರ್ ವಿತರಣೆ

ಗುಳೇದಗುಡ್ಡ ಮೇ.28- ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ದೇಹದಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚಿಸಿ, ನಮ್ಮ ದೇಹವನ್ನು ಕಾಪಾಡುವ ಸಲುವಾಗಿ ಪಟ್ಟಣದಲ್ಲಿನ ಆಸ್ಪತ್ರೆ, ಪುರಸಭೆ, ಪೊಲೀಸ್‍ಠಾಣಾ, ತಹಶೀಲದಾರ ಕಾರ್ಯಾಲಯ ವ್ಯಾಪ್ತಿಯ ಕೊರೊನಾ ಪ್ರಂಟಲೈನ್ ವಾರಿಯರ್ಸ್‍ಗಳ ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಸ್ಥಳೀಯ ಪತ್ರಕರ್ತರುಗಳಿಗೆ ಪಟ್ಟಣದ ಭಾಜಪ ಯುವ ಮೋರ್ಚಾದಿಂದ ಇಮ್ಯುನಿಟಿ ಬೂಸ್ಟರ್ ವಿತರಣೆ ಮಾಡಿದರು.
ಭಾಜಪ ಯುವ ಮೋರ್ಚಾ ಅಧ್ಯಕ್ಷ ರಾಜು ಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನ ಪೂಜಾರ, ಮುತ್ತು ಚಿಕ್ಕನರಗುಂದ, ಮಣಿಕಂಠ ಎಣ್ಣಿ, ಮಹಾಂತೇಶ ಹಿರೇಮಠ, ಪ್ರಭು ಕಳ್ಳಿಗುಡ್ಡ, ಚೇತನ ಪಸಾರಿ, ಹರೀಶ್ ಪರಗಿ, ಸಿದ್ದು ಹಿರೇಮಠ ಸೇರಿದಂತೆ ಮತ್ತಿತರರಿದ್ದರು.