ವಾರಿಯರ್ಸ್‍ಗಳಿಗೆ ಆಹಾರ ಕಿಟ್ ವಿತರಣೆ

ಮುನವಳ್ಳಿ,ಜೂ3: ಪಟ್ಟಣದಲ್ಲಿ ಮಂಗಳವಾರ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಹಾಗೂ ಪಂಚನಗೌಡ್ರ ದ್ಯಾಮನಗೌಡ್ರ ಇವರ ಇಬ್ಬರ ಜನ್ಮದಿನದ ನಿಮಿತ್ಯ ಸವದತ್ತಿ ತಾಲೂಕಿನ ಜನತೆಗೆ ಕೋವಿಡ್ ತುರ್ತು ಸಂದರ್ಭದಲ್ಲಿ ಸಹಾಯವಾಗಲೆಂದು ಉಚಿತ ಅಂಬುಲೆನ್ಸ್ ಹಾಗೂ ಕೊರೊನಾ ಸೇನಾನಿಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸತೀಶ ಜಾರಕಿಹೊಳಿ, ಕೊರೊನಾ ಎರಡನೇ ಅಲೆ ತಡೆಯಲು ಸರ್ಕಾರದ ಜತೆಗೆ ಸಾರ್ವಜನಿಕರು, ಉದ್ದಿಮೆದಾರರು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಲ್ಲರೂ ಜಾಗೃತಿಯಿಂದ ಇದ್ದು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲಿಸಿ ಸ್ವಚ್ಛತೆ ಕಾಪಾಡಬೇಕು ದೈಹಿಕ ಅಂತರ ಕಾಯ್ದುಕೊಂಡರೆ ಕರೊನಾ ರೋಗವನ್ನು ನಿಯಂತ್ರಿಸಬಹುದು.
ಸರ್ಕಾರ ವಿಜ್ಞಾನಿಗಳು ಕರೊನಾ ನಿಯಂತ್ರಣ ಮಾಡಲು ಶ್ರಮಿಸುತ್ತಿದ್ದಾರೆ ಹಾಗಾಗಿ ಜನರು ಕೂಡ ಮೂರನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ರೋಗಿಗಳಿಗಾಗಿ ನಮ್ಮ ಜಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಮಾಡಬೇಕು ಯುವಕರ ತಂಡ ಸ್ವಯಂ ಸ್ಫೂರ್ತಿಯಿಂದ ಶವ ಸಂಸ್ಕಾರ ಸೇವೆ ಮಾಡುತ್ತಿರುವುದು ಮೆಚ್ಚುವ ಕಾರ್ಯ ಕೋವಿಡ್ ಸಂಕಷ್ಟದ ಸಮಯದಲ್ಲಿ ಪಂಚನಗೌಡ ದ್ಯಾಮನಗೌಡರ ಮುತುವರ್ಜಿ ವಹಿಸಿ ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಎಲ್ಲರು ವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ನಿಯಮ ಪಾಲಿಸಬೇಕು ನಾವು ಬದುಕಬೇಕು ನಮ್ಮ ಜತೆ ಇರುವವರನ್ನೂ ಬದುಕಿಸಬೇಕಾಗಿದೆ, ತಾಲೂಕಿನಾದ್ಯಂತ ಕಡು ಬಡವರಿಗೆ ಹಾಗೂ ಕರೊನಾ ಸೇನಾನಿಗಳಿಗೆ 10 ಸಾವಿರ ಆಹಾರ ಕಿಟ್ ನೀಡಲಾಗುತ್ತಿದೆ ಸಾರ್ವಜನಿಕರ ನೋವಿಗೆ ನಾವು ಸ್ಪಂದಿಸುತ್ತಿದ್ದೇವೆ ಕರೊನಾ ಸೇನಾನಿಗಳಾಗಿ ಪತ್ರಕರ್ತರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಜಗತ್ತಿನಿಂದ ಆದಷ್ಟು ಬೇಗ ಕರೊನಾ ರೋಗ ತೊಲಗಲಿ ಎಂದರು.
ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನದಲ್ಲಿ ಎಲ್ಲರು ದೈರ್ಯದಿಂದಿರಿ ಕರೊನಾ ರೋಗವನ್ನು ಧೈರ್ಯದಿಂದ ನಮ್ಮ ದೇಶದಿಂದ ಹೊಡದೊಡಿಸಲು ಸಿದ್ದರಾಗೀರಿ ಜೀವ ಇದ್ದರೆ ಜೀವನ ಎಂದರು. ತಹಸೀಲ್ದಾರ್ ಪ್ರಶಾಂತ ಪಾಟೀಲ ಹಾಗೂ ತಾಲೂಕು ವೈದ್ಯಾಧಿಕಾರಿ ಮಹೇಶ ಚಿತ್ತರಗಿ ಪ್ರಾಸ್ತಾವೀಕವಾಗಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ರವೀಂದ್ರ ಯಲಿಗಾರ, ವಿಶ್ವಾಸ ವೈಧ್ಯ, ಎಂ.ಆರ್.ಗೋಪಶೆಟ್ಟಿ, ಉಮೇಶ ಬಾಳಿ, ಅಂಬರೀಷ ಯಲಿಗಾರ, ಸೌರಭ ಚೋಪ್ರಾ, ಜಿಪಂ ಸದಸ್ಯ ಫಕೀರಪ್ಪ ಹದ್ದಣ್ಣವರ, ಡಾ||ಎಸ್.ಎಲ್.ದಂಡಗಿ, ಡಾ||ರವಿ ಹನಸಿ, ಗೌತಮ ದ್ಯಾಮನಗೌಡರ, ಎ.ಎಸ್.ಐ ಬಿ.ಆರ್.ಸಣ್ಣಮಾಳಗಿ, ಡಾ||ನಭೀಸಾಬ್ ತಾಸೇದ, ಡಾ||ಬಸೀರ್ ಅಹ್ಮದ್ ಬೈರಕದಾರ, ಕಲ್ಲಪ್ಪ ನಲವಡೆ, ಮಾಧವ ಶಿಂಧೆ, ಆನಂದ ಬಕರಿ, ಪರಶುರಾಮ ಗಂಟಿ, ಮೀರಾಸಾಬ ವಟ್ನಾಳ, ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಹೆಸ್ಕಾಂ, ಆರೋಗ್ಯ ಪುರಸಭೆ ಸಿಬ್ಬಂದಿ ಹಾಗೂ ದ್ಯಾಮನಗೌಡ್ರ ಅಭಿಬಾನಿ ಬಳಗ ಇತರರು ಉಪಸ್ಥಿತರಿದ್ದರು.
ಶಿಕ್ಷಕ ಭವಾನಿ ಕೊಂದುನಾಯ್ಕ ಸ್ವಾಗತೀಸಿ ಕಾರ್ಯಕ್ರಮವನ್ನು ನೀರೂಪಿಸಿದರು.