ವಾರಿಯರ್ಸಗಳಿಗೆ ಹಣ್ಣು ವಿತರಣೆ

ಬಾದಾಮಿ, ಜೂ5: ಬಾದಾಮಿ ನಗರದ ಯುವ ಮುಖಂಡ ವೆಂಕಟೇಶ ವೆಂಕಪ್ಪ ವಡ್ಡರ ಹುಟ್ಟು ಹಬ್ಬದ ಪ್ರಯುಕ್ತ ಕರೋನಾ ವಾರಿಯರ್ಸಗಳಾದ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ಪೆÇೀಲಿಸ್ ಸಿಬ್ಬಂದಿಗಳಿಗೆ ಜವಾರಿ ಬಾಳೆಹಣ್ಣು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ ವಡ್ಡರ ಕರೋನಾ ಸಂಕಷ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸುತ್ತಿರುವ ಕರೋನಾ ವಾರಿಯರ್ಸ್ ಗಳಿಗೆ ಅಳಿಲು ಸೇವೆ ಮಾಡಿದರೆ ಸೂಕ್ತ ಎಂದರಿತು ಇಂದು ಅವರಿಗೆಲ್ಲಾ ಬಾಳೆ ಹಣ್ಣುಗಳನ್ನು ವಿತರಿಸಿದ್ದು ನನಗೆ ಹೆಚ್ಚು ಸಂತಸವಾಗಿದೆ ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ, ಪಿ.ಎಸ್.ಐ ನೇತ್ರಾವತಿ ಪಾಟೀಲ, ಶಂಭುಲಿಂಗ ಹಿರೆಮಠ, ಪತ್ರಕರ್ತ ಬಸವರಾಜ್ ಉಳ್ಳಾಗಡ್ಡಿ, ಪೆÇೀಲಿಸ್ ಮಹಾಂತೇಶ ಹರದೊಳ್ಳಿ, ವಾಲಿಕಾರ, ವೆಂಕಟೇಶ ವೆಂಕಪ್ಪ ವಡ್ಡರ ( ಕಟ್ಟಪ್ಪ), ಮಹಾಂತೇಶ ಮಡಿವಾಳರ, ಮಲ್ಲು ಭೀಮಪ್ಪ ವಡ್ಡರ, ಪರಶುರಾಮ ಢಾಣಕಶಿರೂ( ಮರಿ ಕಟ್ಟಪ್ಪ), ಪಾಂಡು ರಾಮಣ್ಣ ವಡ್ಢರ, ಮಂಜು ಕಾಟಾಪೂರ, ಸಂತೋಷ ಹನುಮಂತ ವಡ್ಡರ, ಗಂಗಾರಾಮ ನಾರಾಯಣಪ್ಪ ವಡ್ಡರ, ಯಲ್ಲಪ್ಪ ವಡ್ಡರ ಸೇರಿದಂತೆ ತಾಲೂಕ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.