ವಾರಾಂತ್ಯ ಬಂದ್ ಕಟ್ಟುನಿಟ್ಟಾಗಿ ಜಾರಿ ಉಲ್ಲಂಘಿಸಿದರೆ ಕಠಿಣ ಕ್ರಮ; ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು, ಏ. 22- ಲಾಕ್ ಡೌನ್ ಮಾದರಿಯಲ್ಲೇ ವಾರಾಂಂತ್ಯ ಬಂದ್ ಕಟ್ಟು‌ ನಿಟ್ಟಾಗಿ ಇರಲಿದೆ ಎಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಾರಾಂತ್ಯದ ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಾರಾಂತ್ಯದ ಲಾಕ್ ಡೌನ್ ಕುರಿತು ನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿಗಳ ಜತೆ ಬೊಮ್ಮಾಯಿ ಸಭೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರ ಜಿಲ್ಲೆಗಳಿಂದ ಪ್ರವೇಶಿಸುವ ರಸ್ತೆಗಳು, ಎಲ್ಲ ಮೇಲ್ಸೇತುವೆ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ರಾತ್ರಿ ಕರ್ಫ್ಯೂ ಗೆ ನಾಗರಿಕರು ಸಹಕಾರ ನೀಡುತ್ತಿದ್ದಾರೆ. ಅದೇ ರೀತಿ ವಾರಾಂತ್ಯದ ಕರ್ಫ್ಯೂ ಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಆಂಬ್ಯುಲೆನ್ಸ್‌ ಸಂಖ್ಯೆಯನ್ನೂ 850 ರಿಂದ 1250 ಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್‌ ಸಿಬ್ಬಂದಿಗೆ ಕೊರೊನಾದಿಂದ ರಕ್ಷಣೆಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಠಾಣೆಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಳೆದ ಬಾರಿ 11,000 ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಂದ ಪಡೆಯಲಾಗಿತ್ತು. ಈ ಬಾರಿ ಈವರೆಗೆ 7 ಸಾವಿರ ಮಾತ್ರ ಸಿಕ್ಕಿದೆ. ಉಳಿದ 4 ಸಾವಿರ ಹಾಸಿಗೆಗಳನ್ನು ಮೂರು ದಿನಗಳಲ್ಲಿ
ಪಡೆದುಕೊಳ್ಳಲಾಗುವುದು ಎಂದರು.