ವಾರಾಂತ್ಯ ಕಫ್ರ್ಯೂ ಸಂಪೂರ್ಣ ಯಶಸ್ವಿ : ಧಾರವಾಡ ಜಿಲ್ಲೆ ಸ್ತಬ್ಧ

ಹುಬ್ಬಳ್ಳಿ ಏ 24 : ಕೊರೊನಾ ಎರಡನೇ ಅಲೆ ಕಟ್ಟಿ ಹಾಕಲು ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಜಾರಿಯಾಗಿದ್ದು, ಧಾರವಾಡ ಜಿಲ್ಲೆಯಾದ್ಯಂತ ವಾರಾಂತ್ಯ ಕಫ್ರ್ಯೂ ಸಂಪೂರ್ಣ ಯಶಸ್ವಿಯಾಗಿದ್ದು, ಜನತೆಯಿಂದ ಬೆಂಬಲ ವ್ಯಕ್ತವಾಗಿದೆ.

ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸಮಯವಕಾಶವನ್ನು ಕಲ್ಪಿಸಲಾಗಿತ್ತು. 10 ಗಂಟೆಯ ನಂತರ ಹು-ಧಾ ಅವಳಿ ನಗರದಾದ್ಯಂತ ರಸ್ತೆಗಳಿದ ಪೆÇಲೀಸರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುವ ಕಾರ್ಯಾಚರಣೆಯಲ್ಲಿ ತೊಡಗಿ ವ್ಯಾಪಾರಸ್ಥರನ್ನು ತೆರವು ಮಾಡಿಸಲು ಮುಂದಾದರು.

ಬೆಳಿಗ್ಗೆ 10 ಗಂಟೆಯ ನಂತರ ಜನರ ಓಡಾಟ, ವಾಹನ ಸಂಚಾರವಿಲ್ಲದೆ ಅವಳಿ ನಗರ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದು ಸಂಪೂರ್ಣ ಸ್ತಬ್ಧವಾಯಿತು.

ಕೊರೊನಾ ತಡೆಗೆ ಕಠಿಣ ವಾರಾಂತ್ಯ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೇಶ್ವಾಪೂರ, ಗೋಕುಲ್ ರೋಡ್, ಪಿ.ಬಿ. ರೋಡ್, ಸ್ಟೇಶನ್ ರಸ್ತೆ ಹಾಗೂ ಧಾರವಾಡದ ಜುಬ್ಲಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೆÇಲೀಸರು ಸರ್ಪಗಾವಲು ನಿಂತು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಒದಗಿಸಿದರು.

ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರನ್ನು ತಡೆದು ಪೆÇಲೀಸರು ಕಾರ್ಯಾಚರಣೆ ನಡೆಸಿ ಅಗತ್ಯ ಕೆಲಸಕ್ಕೆ ಹೋಗುವವರಿಗೆ ಅವಕಾಶ ನೀಡಿ, ಅನಗತ್ಯ ಓಡಾಡುವವರನ್ನು ತಡೆದು ವಾಹನಗಳನ್ನು ಸೀಜ್ ಮಾಡುವ ಮೂಲಕ ಅನಗತ್ಯವಾಗಿ ಹೊರಗೆ ಬಾರದಂತೆ ಎಚ್ಚರಿಕೆ ನೀಡಿದರು.

ಇನ್ನೂ ನೆರೆಯ ಜಿಲ್ಲೆಗಳಾದ ಗದಗ, ಹಾವೇರಿ, ಕಾರವಾರ, ಬೆಳಗಾವಿ, ಬಾಗಲಕೋಟ ಜಿಲ್ಲೆಯಲ್ಲಿಯೂ ಸಹ ವಾರಾಂತ್ಯ ಕಫ್ರ್ಯೂಗೆ ಬೆಂಬಲ ವ್ಯಕ್ತವಾಗಿದೆ.

ಅಗತ್ಯ ಸೇವೆಗಾಗಿ ಬಸ್ ಸಂಚಾರ :
ವಾರಾಂತ್ಯ ಕಫ್ರ್ಯೂ ನಡೆವೆಯೂ ಜನರ ಅನುಕೂಲತೆಗೆ ಅನುಗುಣವಾಗಿ ನಗರ ಹಾಗೂ ಗ್ರಾಮೀಣ ಬಸ್ ಸಂಚಾರವಿದ್ದು, ಜನರು ಅಗತ್ಯ ಕೆಲಸ ಇದ್ದರೇ ಮಾತ್ರ ಓಡಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಅಲ್ಲಲ್ಲಿ ಬಸ್ ಗಳ ಸಂಚಾರ ಕಂಡು ಬಂದಿದ್ದು, ಸ್ಟೇಶನ್ ರಸ್ತೆ, ಗೋಕುಲ್ ರಸ್ತೆ,
ವಿದ್ಯಾನಗರ, ಹಳೇ ಹುಬ್ಬಳ್ಳಿ, ಹಾಗೂ ಪ್ರಮುಖ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಬಸ್ ಗಾಗಿ ಕಾಯ್ದು ನಿಂತಿರುವುದು ಕಂಡು ಬಂದಿತು.

ನಗರದ ಹಳೇ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣದಲ್ಲಿ ಹಾವೇರಿ, ಗದಗ, ಬೆಳಗಾವಿ ಇತರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಬಸ್ ಗಳು ಕಾಯ್ದು ನಿಂತಿದ್ದವು.

ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನತೆ :
ಬೆಳಿಗ್ಗೆ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯವಕಾಶವನ್ನು ಕಲ್ಪಿಸಲಾಗಿತ್ತು, ಆದರೇ ಜನತೆ ಏಕಾಏಕಿ ಮಾರುಕಟ್ಟೆಗೆ ಆಗಮಿಸಿ ಕೊರೊನಾ ನಿಯಮ ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಗ್ರಾಹಕರು ಹಾಗೂ ವ್ಯಾಪಾರಸ್ಥರು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದ್ದು ಕಂಡು ಬಂದಿತು.