ವಾರಾಂತ್ಯ ಕಫ್ರ್ಯೂ- ಬ್ಯಾಡಗಿ ಸ್ತಬ್ದ


ಬ್ಯಾಡಗಿ,ಎ.25: ಕೋವಿಡ್-19 ರೋಗದ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿದ್ದ ಎರಡು ದಿನಗಳ ವಾರಾಂತ್ಯ ಕಫ್ರ್ಯೂಗೆ ಮೊದಲ ದಿನವಾದ ಶನಿವಾರ ಬ್ಯಾಡಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳು ಸಂಪೂರ್ಣ ಸ್ತಬ್ಧಗೊಂಡಿದ್ದು ಬಹುತೇಕ ಯಶಸ್ವಿಯಾಯಿತು.
ಕಫ್ರ್ಯೂ ಹಿನ್ನೆಲೆಯಲ್ಲಿ ಸ್ಥಳೀಯ ತಾಲೂಕಾಡಳಿತ, ಪುರಸಭೆ, ಪೆÇಲೀಸ್ ಇಲಾಖೆಗಳ ವತಿಯಿಂದ ಲಾಕ್‍ಡೌನ್ ಕುರಿತು ಧ್ವನಿವರ್ಧಕಗಳ ಮೂಲಕ ಮೊದಲೇ ಮಾಹಿತಿ ನೀಡಿದ್ದರಿಂದ, ಅಧಿಕಾರಿಗಳ ಸೂಚನೆಗೆ ಸ್ಪಂದಿಸಿದ ಪಟ್ಟಣದ ಜನರು ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತಗೊಳಿಸಿದ್ದರು, ಯಾರೊಬ್ಬರು ರಸ್ತೆಗಿಳಿಯದೇ ಸಹಕಾರ ನೀಡಿದ್ದರಿಂದ ಅಧಿಕಾರಿಗಳಿಗೆ ಹೆಚ್ಚಿನ ಶ್ರಮ ಬೀಳಲಿಲ್ಲ.
10 ಗಂಟೆಯ ಬಳಿಕ ಎಲ್ಲವೂ ಸ್ಥಗಿತ: ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ದಿನಸಿ ಸೇರಿದಂತೆ ತರಕಾರಿ, ಹಾಲು, ಇನ್ನಿತರ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ಕಾರ್ಯನಿರ್ವಹಿಸಿದವು, ಬಳಿಕ ಎಲ್ಲವೂ ತನ್ನಿಂತಾನೇ ಸ್ಥಬ್ಧಗೊಂಡವು, ತಾಲೂಕಾ ದಂಡಾಧಿಕಾರಿ ರವಿಕುಮಾರ ಕೊರವರ, ಸಿಪಿಐ ಬಸವರಾಜ, ಪಿಎಸ್‍ಐ ಮಹಾಂತೇಶ, ಮುಖ್ಯಾಧಿಕಾರಿ ವಿ.ಎಂ. ಪೂಜಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ತಂದಿದ್ದ ತರಕಾರಿ ಮಾರಾಟಕ್ಕೆ ಅವಕಾಶ: ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ಪುರಸಭೆ ರದ್ದುಪಡಿಸಿತ್ತು, ಅದಾಗ್ಯೂ ಮಾಹಿತಿ ಇಲ್ಲದ ರೈತರು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು, ಅಂತಹವರಿಗೂ ಸಹ 10 ಗಂಟೆಯವರೆಗೆ ಮಾರಾಟಕ್ಕೆ ಸಂತೆ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಬಾಕ್ಸ್:
ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಗಿತ: ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ರೈತರು ವ್ಯಾಪಾರಸ್ಥರು ಹಾಗೂ ಕೂಲಿಕಾರ್ಮಿಕರಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಯಾರ್ಡ ಸಂಪೂರ್ಣ ಸ್ಥಗಿತಗೊಂಡಿತ್ತು, ಆದರೆ ಅಂತರಾಜ್ಯ ಸಾಗಾಟಕ್ಕೆ ಆಗಮಿಸಿದ್ದ ವಾಹನಗಳು ಮಾತ್ರ ಎಂದಿನಂತೆ ಸಂಚರಿಸಿದವು.

ಬಾಕ್ಸ್..
ತಹಶೀಲ್ಧಾರಿಂದ ಬೆತ್ತದ ರುಚಿ: ಕಫ್ರ್ಯೂ ಜಾರಿಯಿದ್ದಾಗಲೂ ಮಾಸ್ಕ ಧರಿಸದೇ ರಸ್ತೆಗಿಳಿದಿದ್ದ ಸಾರ್ವಜನಿಕರಿಗೆ ತಹಸೀಲ್ದಾರ ರವಿಕುಮಾರ, ಸಿಪಿಐ ಬಸವರಾಜ, ಮುಖ್ಯಾಧಿಕಾರಿ ಪೂಜಾರ ಇನ್ನಿತರ ಅಧಿಕಾರಿಗಳ ತಂಡವು ಬೆತ್ತದ ರುಚಿಸಿದ ತೋರಿಸಿ ತಲ್ಲದೇ ಇನ್ನೂ ಕೆಲವರಿಗೆ ದಂಡದ ಬಿಸಿಯೂ ಬಿತ್ತು..