ವಾರಾಂತ್ಯ ಕಫ್ರ್ಯೂ ಬಳಿಕ ಜನಜೀವನ ಸಹಜ ಸ್ಥಿತಿಗೆ

ಕಲಬುರಗಿ ಏ 26: ಶನಿವಾರ ಮತ್ತು ರವಿವಾರಗಳ ವಾರಾಂತ್ಯದ ಕಫ್ರ್ಯೂ ಬಳಿಕ ನಗರದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.
ರಸ್ತೆಗಳು ಜನರು,ವಾಹನಗಳಿಂದ ತುಂಬಿ ಗಿಜಗುಡುತ್ತಿವೆ.ಸೂಪರ್ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಕಿರಾಣಾ ಬಜಾರ್ ,ನೆಹರು ಗಂಜ್, ರಾಮಮಂದಿರ ವೃತ್ತ,ಸರದಾರ ವಲ್ಲಭಭಾಯಿ ಪಟೇಲ್ ವೃತ್ತ,ಜಗತ್ ವೃತ್ತ ಸೇರಿದಂತೆ ಹಲವಾರು ಕಡೆ ಎಂದಿನಂತೆ ಜನಜಂಗುಳಿ ಕಂಡು ಬಂದಿತು.
ಸರಕಾರಿ ಕಚೇರಿಗಳು ಮಧ್ಯಾಹ್ನವೇ ಬಾಗಿಲು ಮುಚ್ಚುವದರಿಂದ ಜಿಲ್ಲಾಧಿಕಾರಿ ಕಚೇರಿ ಮುಂತಾದ ಕಡೆ ಸಾರ್ವಜನಿಕರ ಸಂಚಾರ ಹೆಚ್ಚಾಗಿ ಕಾಣಿಸಿತು. ಅಂಗಡಿ ಮುಂಗಟ್ಟುಗಳು ತೆರೆದಿವೆ.ಕೆಲವು ಹೋಟೆಲ್ಲುಗಳ ಮುಂದೆ ಕೇವಲ ಪಾರ್ಸಲ್ ಮಾತ್ರ ಎಂಬ ಸೂಚನಾಫಲಕ ನಿಲ್ಲಿಸಿದ್ದಾರೆ.
ನಿಯಮಗಳಿರುವದು ಮುರಿಯಲು ಎಂಬಂತೆ ಹಲವಾರು ಜನ ಕೊರೋನಾಗೆ ಕೇರ್ ಮಾಡದೇ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವದು ಕಂಡು ಬಂತು.ಸಾಮಾಜಿಕ ಅಂತರವಂತೂ ದೂರವೇ ಉಳಿದಿದೆ.
ರವಿವಾರ ರಾತ್ರಿ ಕಫ್ರ್ಯೂ ವೇಳೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರಿಂದ ರಸ್ತೆಯಲ್ಲಿ ಅನಾವಶ್ಯಕವಾಗಿ ಓಡಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು