ವಾರಾಂತ್ಯ ಕಫ್ರ್ಯೂ ಜಾರಿ: ಚಿಂಚೋಳಿ ಸ್ತಬ್ದ

ಚಿಂಚೋಳಿ,ಏ.25- ಕೋವಿಡ್ 19- ಎರಡನೆ ಅಲೆಯ ಹಿನ್ನಲೆಯಲ್ಲಿ ಸರ್ಕಾರ ಜಾರಿ ಮಾಡಿದ ವಾರಾಂತ್ಯದ ಕಫ್ರ್ಯೂ ಪರಿಣಾಮ ಇಲ್ಲಿನ ಚಂದಾಪುರ ಪಟ್ಟಣ ಸೇರಿದಂತೆ ಚಿಂಚೋಳಿಯ ಎಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳು ಮುಚ್ಚಿದ್ದವು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನಲೆಯಲ್ಲಿ ರಸ್ತೆಗಳ ಮೇಲೆ ವಾಹನಗಳ ಓಡಾಟ ಇಲ್ಲದೇ ಬಿಕೋ ಎನ್ನುತ್ತಿದ್ದ ದೃಷ್ಯಗಳು ಕಂಡುಬಂದವು.
ಪೊಲೀಸರು ಮತ್ತು ಅಧಿಕಾರಿಗಳು ಸೂಕ್ತಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಹಾಗೂ ಕೋವಿಡ್- ನಿಯಮವಳಿ ಪಾಲನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ವಾರಾಂತ್ಯದ ಕಫ್ಯೂ ವೇಳೆಯಲ್ಲಿ ಜನರ ಓಡಾಟ ಕಂಡು ಬರಲಿಲ್ಲ.