ವಾರಾಂತ್ಯದ ಕಫ್ರ್ಯೂ: ಛಾಯಾಚಿತ್ರ ಗ್ರಾಹಕರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲು ಆಗ್ರಹಿಸಿ ಮನವಿ

(ಸಂಜೆವಾಣಿ ವಾರ್ತೆ)
ಇಂಡಿ :ಎ.25:ವಾರಾಂತ್ಯದ ಕಫ್ರ್ಯೂ ಸಮಯದಲ್ಲಿ ತಾಲೂಕಿನ ಛಾಯಾಗ್ರಾಹಕರು ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಇಂಡಿ ತಾಲೂಕ ಛಾಯಾಚಿತ್ರ ಗ್ರಾಹಕರ ಮತ್ತು ವಿಡಿಯೋ ಗ್ರಾಫರ ಸಂಘದ ಪದಾ„ಕಾರಿಗಳು ಗುರುವಾರ ಡಿವೈಎಸ್ಪಿ,ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸುಮಾರು 100 ರಿಂದ 200 ಜನ ಛಾಯಾಚಿತ್ರ ಗ್ರಾಹಕರು ಇದರ ಮೇಲೆ ಸ್ವಾವಲಂಭಿ ಬದುಕು ಸಾಗಿಸುತ್ತಿದ್ದು, ಕಳೆದ ವರ್ಷ ಕೋವಿಡ್‍ನಿಂದ ಲಾಕ್‍ಡೌನ್ ಆಗಿದ್ದರಿಂದ ಉದ್ಯೋಗ ಇಲ್ಲದೆ ಕುಟುಂಬಗಳು ಬೀದಿಗೆ ಬಿದ್ದಿವೆ. ಪ್ರಸ್ತುತ ವರ್ಷವೂ ಇದೆ ರೀತಿ ಮುಂದುವರೆದರೆ ಅಂಗಡಿಗಳು ಮುಚ್ಚಿಕೊಂಡಿದ್ದರಿಂದ ಕುಟುಂಬಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ.ಎಪ್ರೀಲ್,ಮೇ,ಜೂನ್ ತಿಂಗಳಲ್ಲಿ ಜರುಗಬೇಕಾಗಿದ್ದ ಮದುವೆ,ಇನ್ನಿತರ ಸಮಾರಂಭಗಳನ್ನು ಮುಂಗಡವಾಗಿ ಒಪ್ಪಿಕೊಂಡಿರುತ್ತೇವೆ.ಸರ್ಕಾರವು ಹೊರಡಿಸಿದ ವಾರಾಂತ್ಯದ ನಿಷೇಧಾಜ್ಞೆ ಸಮಯದಲ್ಲಿ ನಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು.ಪಾಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಗಣೇಶ ಕುಂಬಾರ, ಉಪಾಧ್ಯಕ್ಷ ಇಸಾಕ ಲಾಳಸಂಗಿ,ಅಶೋಕ ಜಾಧವ, ಶಿವಾನಂದ ಜೆವೂರ,ಮಲ್ಲಿಕಾರ್ಜುನ ಮಂದ್ರೂಪ, ದೇಸು ಚವ್ಹಾಣ, ಪ್ರತಾಪ ಚವ್ಹಾಣ, ಶಿವಾನಂದ ತೆಗ್ಗಿನಮಠ, ಪ್ರವೀಣ ಕೋಟಿ,ಅನೀಲ ರಾಠೋಡ, ಮಹಾಂತೇಶ ಹುಣಸಗಿ, ಶರಣಬಸು ಮಸಳಿ, ಸಂತೋಷ ರಾಠೋಡ, ಸಿ.ಎಸ್.ರಾಠೋಡ ಇತರರು ಈ ಸಂದರ್ಭದಲ್ಲಿ ಇದ್ದರು.