ವಾರಸುದಾರನಿಗೆ ಮೊಬೈಲ್ ತಲುಪಿಸಿದ ಯುವಕ


ಜಗಳೂರು.ನ.೬; ಬಸ್‌ನಲ್ಲಿ ದಾವಣಗೆರೆಗೆ ಹೋಗುವಾಗ ಮೊಬೈಲ್ ಬಿಟ್ಟುಹೋದ ವ್ಯಕ್ತಿಗೆ ಜಗಳೂರು ಪೊಲೀಸರ ಮುಖಾಂತರ ಸಂಬಂಧಪಟ್ಟ ವ್ಯಕ್ತಿಗೆ ಮೊಬೈಲ್ ತಲುಪಿಸಿದ ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿಯ ರಮೇಶ್ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ಆರು ಗಂಟೆ ಸುಮಾರಿನಲ್ಲಿ ಯಾವುದೋ ಒಂದು ಕೆಲಸಕ್ಕೆ ಜಗಳೂರಿನಿಂದ ದಾವಣಗೆರೆಗೆ ಜಗಳೂರು ಗೊಲ್ಲರಟ್ಟಿ ಗ್ರಾಮದ ಯುವಕ ಶ್ರೀನಾಥ್ ಇವರು ಎಸ್‌ಎಂಎಲ್ ಬಸ್ಸನಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ನಿದ್ದೆ ಮಂಪರಿನಲ್ಲಿದ್ದ ರಮೇಶ್
ದಾವಣಗೆರೆ ಬಂದಿದೆ ಎಂದು ಕಂಡಕ್ಟರ್ ಕೂಗಿದ ತಕ್ಷಣ ಬಸ್ಸಿನ ಸೀಟಿನಲ್ಲಿ ಮೊಬೈಲ್ ಬಿಟ್ಟು ಹೋಗಿದ್ದ ಪಕ್ಕದಲ್ಲಿದ್ದ ಅದೇ ಸೀಟಿನಲ್ಲಿ ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದ ಯುವಕ ರಮೇಶ ಇವರಿಗೆ ಮೊಬೈಲ್ ಸಿಕ್ಕಿದ್ದು ಅದನ್ನು ೨೪ ಗಂಟೆಯ ಒಳಗಾಗಿ ಜಗಳೂರು ಪೊಲೀಸ್ ಠಾಣೆಗೆ ಬಂದು ಎಎಸ್‌ಐ ಚಂದ್ರಶೇಖರ್ ಇವರಿಗೆ ನನಗೆ ಬಸ್ಸನಲ್ಲಿ ಒಂದು ಮೊಬೈಲ್ ಸಿಕ್ಕಿದೆ ಅದು ಯಾರದು ಎಂಬು ಗೊತ್ತಿಲ್ಲ ಎಂದು ರಮೇಶ್ ಪೊಲೀಸರಿಗೆ ತಿಳಿಸಿದರು. ತಕ್ಷಣವೇ ಪೊಲೀಸ್ ಸಿಬ್ಬಂದಿಗಳು ಮೊಬೈಲ್ ನಂಬರ್ ಚೆಕ್ ಮಾಡಿ ಮೊಬೈಲ್ ಕಳೆದುಕೊಂಡ ವ್ಯಕ್ತಿ ಜಗಳೂರು ಗೊಲ್ಲರಹಟ್ಟಿಯ ಯುವಕ ಶ್ರೀನಾಥ ಅವರಿಗೆ ಸೇರಿದೆ ಎಂದು ತಿಳಿದು ಬಂದ ಕೂಡಲೇ ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಮೊಬೈಲ್‌ನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗಳೂರು ಪೊಲೀಸ್ ಠಾಣೆಯ ಂSI ಚಂದ್ರಶೇಖರ್ ಸಿಬ್ಬಂದಿಗಳಾದ ಮಾಂತೇಶ್ ಎಚ್ ಸಿ. ಜಗದೀಶ್ ಸೇರಿದಂತೆ ಇತರರಿದ್ದರು