ವಾರದ ಸಂತೆ ಬಜಾರ ರೋಗಗಳ ಉಗಮ ಸ್ಥಾನ

ಪುರಸಭೆ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ!
ದುರಗಪ್ಪ ಹೊಸಮನಿ
ಲಿಂಗಸುಗೂರು.ನ.೧೪-ಲಿಂಗಸುಗೂರು ವಾರದ ಸಂತೆ ಬಜಾರ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ವಾರ್ಡ್ ನಲ್ಲಿ ವಾಸಮಾಡುವ ನಿವಾಸಿಗಳ ಚರಂಡಿ ಕಲ್ಮಷ ತುಂಬಿ ಹರಿಯುವ ರಸ್ತೆ ಮೇಲೆ ನೀರು ಹರಿಯುವ ಮೂಲಕ ಶನಿವಾರದ ಸಂತೆ ಬಜಾರ ಗಬ್ಬೇದ್ದುನಾರುತ್ತಿದೆ ಆದರೂ ಕೂಡ ಇಲ್ಲಿನ ವಾರ್ಡ್ ನಂಬರ್ ೦೫ ಸದಸ್ಯ ಗದ್ದೆಮ್ಮ ಬೋವಿ ಸದಸ್ಯರು ಇದೆ ವಾರ್ಡ್ ಸದಸ್ಯೆ ಗದ್ದೆಮ್ಮ ಯಮನೂರ ಭೋವಿ ಇವರು ಪ್ರಸ್ತುತ ಪುರಸಭೆ ಅಧ್ಯಕ್ಷೆರಾಗಿ ಆಡಳಿತ ನಡೆಸುವ ಮೂಲಕ ಈ ವಾರ್ಡ್‌ಗಳಲ್ಲಿ ಸಮಸ್ಯೆಗಳು ದಿನ ನಿತ್ಯ ಬೆಳಗಾದರೆ ಸಾಕು ಒಂದಿಲ್ಲೊಂದು ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಧ್ಯಕ್ಷರು ವಿಫಲರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಪುರಸಭೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸೂಗೂರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರದ ಸಂತೆ ಪ್ರತಿ ವಾರಕೊಮ್ಮೆ ವಾರ್ಡ್‌ನಂ ೦೫ರಲ್ಲಿ ನಡೆಯುತ್ತಿದ್ದು ಇಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ವಚ್ಚ ಭಾರತ ಯೋಜನೆಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದು ಇಲ್ಲಿ ಯಾವ ಸ್ವಚ್ಛ ಭಾರತ ಯೋಜನೆ ಹಣ ಯಾವ ಖಾತೆಗೆ ಅಥವಾ ಯೋಜನೆ ಹಣ ಬಿಡುಗಡೆ ಯಾಗಿಲ್ಲವೇನು ಪುರಸಭೆಯ ನಿರ್ಲಕ್ಷ್ಯ ಧೋರಣೆ ಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ವಾರದ ಸಂತೆಯಲ್ಲಿ ವ್ಯಾಪಾರ ಮಾಡುವರ ಪರಿಸ್ಥಿತಿ ತುಂಬ ಶೋಚನೀಯವಾಗಿದೆ ಚರಂಡಿಯ ನೀರು ಹರಿಯುತ್ತಿದ್ದು ಸಂತೆ ಬಜಾರನಲ್ಲಿ ತರಕಾರಿ ಮಾರಲು ಬರುವ ರೈತರಿಗೆ ಕೊಡಲು ಜಾಗದಲ್ಲಿ ಚರಂಡಿ ನೀರು ಹರಿದು ಬರುತ್ತಿರುವುದು ಕಂಡ್ರೆ ಪುರಸಭೆಯ ಅಧ್ಯಕ್ಷರು ಸಹ ಅದೇ ವಾರ್ಡಿನವರು ಆಗಿದ್ದರು ಸಹ ಕಣ್ಣು ಮುಚ್ಚಿಕೊಂಡು ಕುಳಿತಿರುವುದು ಎಂದು ಕಾಣುತ್ತಿದೆ ವಾರ್ಡಿನಲ್ಲಿ ಯಾವದೇ ಅಭಿವೃದ್ಧಿ ಕೆಲಸ ಮಾಡದೇ ಕೇವಲ ಓಟಿಗಾಗಿ ಮಾತ್ರ ವಾರ್ಡಿನಲ್ಲಿ ಬರುತ್ತಾರೆ. ಇಂದು ವಾರದ ಸಂತೆ ಆಗುತ್ತಿದೆ ಎಂದು ಗೊತ್ತಿದ್ದರು ಸಹ ಪರಸಭೆಯ ಅಧಿಕಾರಿಗಳು ಯಾವುದೇ ಸ್ವಚ್ಛತೆ ಮಾಡದೇ ಹಾಗೇ ಬಿಟ್ಟಿರುವುದು ಖಂಡನೀಯವಾಗಿದೆ.
ಇಡೀ ತಾಲ್ಲೂಕಿನಲ್ಲಿ ಲಿಂಗಸೂಗೂರು ವಾರದ ಸಂತೆಯೊ ಅತಿ ದೊಡ್ಡ ಸಂತೆಯಾಗಿದೆ. ಇದರಲಿ ತಾಲೂಕಿನ ಪ್ರತಿ ಹಳ್ಳಿಗಳಿಂದ ರೈತರು ಖರೀದಿ ಮತ್ತು ಮಾರಟಕ್ಕೆ ಬರುತ್ತಾರೆ. ಲಿಂಗಸೂಗೂರು ಪಟ್ಟಣದಲ್ಲಿ ಹಲವಾರು ದಿನಗಳಿಂದ ಚಿಕ್ಕ ಮಕ್ಕಳಿಗೆ ಡೆಂಗು, ಮಲೇರಿಯಾ, ವೈರಲ್ ಫೀವರ್ ನಂತಹ ಹಲವಾರು ರೋಗಗಳು ಪಟ್ಟಣದಲ್ಲಿ ಹರಡುತಿದ್ದು ಪುರಸಭೆ ಆಡಳಿತ ಮಂಡಳಿ ಹಾಗೂ ಪುರಸಭೆ ಮುಖ್ಯೆಧಿಕಾರಿಗಳ ನಿರ್ಲಕ್ಷ್ಯ ಇನ್ನೂ ಎಚ್ಚತುಕೊಳ್ಳದೇ ಇರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳಬೆಕೆಂದು ಸ್ವಾಭಿಮಾನ ಕರ್ನಾಟಕ ರಕ್ಷಣ ವೇದಿಕೆ ಆಗ್ರಹಿಸುತ್ತದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಲಾಗುವುದು.
ಈ ಸಂಧರ್ಬದಲ್ಲಿ ಸ್ವಾಭಿಮಾನ ಕರ್ನಾಟಕ ರಕ್ಷಣ ವೇದಿಕೆಯ ತಾಲೂಕ ಅಧ್ಯಕ್ಷ ಖಾದರ ಭಾಷ, ಕಾರ್ಯಕರ್ತರಾದ ಅಮರೇಶ, ಸಂಗಪ್ಪ, ಬಾಬಾಜಾನಿ, ತರಕಾರಿ ವ್ಯಾಪರಸ್ಥರಾದ ಮಹಬೂಬ್‌ಬೀ, ಗದ್ದೇವ ಮತ್ತು ತರಕಾರಿ ಖರೀದಿದಾರಾದ ಡಾ| ಜಾವೇದ, ಪಾಶಾ ಗಿರಿಣಿ, ಇನ್ನೂ ಕಾರ್ಯಕರ್ತರು ಇದ್ದರು.