ವಾರದ ಸಂತೆಯಲ್ಲಿ ರೈತರಿಂದ ಅಕ್ರಮ ಹಣ ವಸೂಲಿ

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ಲಿಂಗಸುಗೂರು,ಫೆ.೨೭- ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ಐದನೇ ವಾರ್ಡ್‌ನಲ್ಲಿ ಬರುವ ಪ್ರತಿವಾರ ಶನಿವಾರ ನಡೆಯುತ್ತಿರುವ ವಾರದ ಸಂತೆ ಮಾರುಕಟ್ಟೆಯಲ್ಲಿ ರೈತರಿಂದ ಅಕ್ರಮ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಈಗಾಗಲೇ ರೈತರು ಪುರಸಭೆ ಅಧಿಕಾರಿಗೆ ಸಾಕಷ್ಟು ಬಾರಿ ತಿಳಿಸಿದರು.
ಕೂಡ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಪುರಸಭೆ ಆಡಳಿತ ಮಂಡಳಿ ಕಣ್ಣು ಮುಚ್ಚಿಕೊಂಡು ಕುಳಿತು ಕೊಳ್ಳುವ ಮೂಲಕ ಬಡ ವ್ಯಾಪಾರಿಗಳ ಮೇಲೆ ಬರೆ ಎಳೆದು ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಬೆಲೆ ಇಲ್ಲದಂತಾಗಿದೆ ಇಂತಹ ಸಂದರ್ಭದಲ್ಲಿ ಪುರಸಭೆ ಆಡಳಿತ ಮಂಡಳಿಯವರು ರೈತರ ಸಂಕಷ್ಟ ನಿವಾರಿಸಲು ವಿಪಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅದ್ಯೆಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ ಅಧಿಕಾರಿಗಳ ನಡೆ ಮತ್ತು ಪುರಸಭೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾರದ ಸಂತೆ ಹರಾಜು ಮಾಡದೆ ೧೧ತಿಂಗಳು ಕಳೆದಿವೆ ಅದರೂ ಪುರಸಭೆ ಆಡಳಿತ ಮಂಡಳಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಹರಾಜು ಪ್ರಕ್ರಿಯೆ ಮಾಡದೆ ಕೇವಲ ಕಛೇರಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಕುಪ್ಪಣ್ಣ ಮಾಣಿಕ್ ಆರೋಪಿಸಿದರು. ಪುರಸಭೆ ಆಡಳಿತ ಪಕ್ಷದ ವಿರುದ್ಧ ಇಂದು ಪಟ್ಟಣದ ಗಡಿಯಾರ ಚೌಕ ದಿಂದ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಹೊರಾಟ ಮಾಡಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಸಂತೆ ಮಾರುಕಟ್ಟೆಯಲ್ಲಿ ರೈತರಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳಿಗೆ ಶೌಚಾಲಯ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡದೆ ಇರುವುದು ನೋಡಿದರೆ ಆಡಳಿತದಲ್ಲಿ ಹಿಡಿತ ಇಲ್ಲದಂತಾಗಿದೆ ಇದರಿಂದಾಗಿ ಅಕ್ರಮ ತೇರಿಗೆ ಸಂಗ್ರಹ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತಾಲ್ಲೂಕಿನ ರೈತರಿಗೆ ಕೃಷಿ ವಹಿವಾಟು ನಡೆಸಲು ಮುಕ್ತ ಅವಕಾಶ ನೀಡಬೇಕು ಎಂಬುದು ರೈತರ ಆಗ್ರಹ ವಾಗಿದೆ
ಈ ಸಂದರ್ಭದಲ್ಲಿ ಸದಾನಂದ ಮಡಿವಾಳ ನಾಗಮ್ಮ ಜೂಲಗುಡ್ಡ ಲಕ್ಷ್ಮಣ ಬಾಬಾಸಾಹೇಬ್ ಪ್ರಸಾದ್ ರೇಡ್ಡಿ ಸೇರಿದಂತೆ ಇತರರು ಪ್ರತಿಭಟನೆ ನಡೆಸಿದರು.