ವಾರದ ಸಂತೆಯಲ್ಲಿ ಮತದಾನ ಜಾಗೃತಿ

ವಿಜಯಪುರ, ಮೇ.03: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರಿ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮ ಪಂಚಾಯತ ವತಿಯಿಂದ ಕಂಬಾಗಿ ಗ್ರಾಮದಲ್ಲಿ ನಡೆದ ವಾರದ ಸಂತೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದೈನಂದಿನ ಅಗತ್ಯಕ್ಕೆ ಸಾಮಗ್ರಿಯನ್ನು ಕೈಗೊಳ್ಳಲು ಸಂತೆಗೆ ಸುತ್ತಮುತ್ತಲಿನ ಹನುಮಸಾಗರ, ಮದಗುಣಿಕಿ, ಗುಣದಾಳ ಹಳ್ಳಿಗಳಿಂದ ಆಗಮಿಸಿದಂತಹ ಸಾವಿರಕ್ಕೂ ಅಧಿಕ ಜನರಿಗೆ ಕರಪತ್ರ ಹಂಚಿ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮೀನಾಕ್ಷಿ ಚಲವಾದಿ , ಬೀಮಪ್ಪ ತೋದಲಬಾಗಿ, ಪರಮಾನಂದ ಕಿಮತಗಿ, ಮಹಾದೇವಿ ಸಿಂಗೆ, ಶಿವಪ್ಪ ಸನ್ನದ, ಅಮೋಗಸಿದ್ದ ದಳವಾಯಿ ಉಪಸ್ಥಿತರಿದ್ದರು.