ವಾರದ ಸಂತೆಗೆ ಡಿ.ರವಿಶಂಕರ್ ಚಾಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ನ.04:- ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ವಾರದ ಸಂತೆ ಕೋವಿಡ್-19 ಕಾರಣದಿಂದ ಸ್ಥಗಿತಗೊಂಡಿತ್ತು, ಶುಕ್ರವಾರದ ಸಂತೆಗೆ ಮತ್ತೆ ಚಾಲನೆ ನೀಡಲಾಗಿದ್ದು ಸಂತೆ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಂತೆ ಪುನರ್ ಆರಂಭ ಸಮಾರಂಭದಲ್ಲಿ ಮಾತನಾಡಿದ ಅವರು ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕೆಂಬ ದೃಷ್ಠಿಯಿಂದ ಸಂತೆ ಪುನರ್ ಆರಂಭ ಮಾಡಲಾಗಿದ್ದು
ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಂಡು ಸಂತೆ ಉತ್ತಮವಾಗಿ ನಡೆಯಲು ಕಾರಣರಾಗಬೇಕು ಎಂದರು.
ಕೆ.ಆರ್.ನಗರದ ಬಜಾರ್‍ರಸ್ತೆ, ಹುಣಸೂರು ರಸ್ತೆ, ಮಧುವನಹಳ್ಳಿ ರಸ್ತೆ ಸೇರಿದಂತೆ ವಿವಿದ ಕಡೆ ರಸ್ತೆ ಬದಿಯಲ್ಲಿ ತರಕಾರಿ ವ್ಯಾಪಾರಸ್ಥರು ಮಳೆ ಮತ್ತು ಬಿಸಲಿನ ರಕ್ಷಣೆ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ ಇದರಿಂದವ್ಯಾಪರಸ್ಥರು, ರೈತರು ಮತ್ತು ಗ್ರಾಹಕರಿಗೂ ಅನಾನುಕೂಲವಾಗಿದೆ ಅದಕ್ಕಾಗಿ ಎಪಿಎಂಸಿ ಆವರಣದಲ್ಲೇ ತರಕಾರಿ, ಹಣ್ಣು, ಹೂ, ಮತ್ತಿತರರ ಪದಾರ್ಥ ಗಳನ್ನು ಮಾರಾಟ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ವಾರದ ಸಂತೆಯನ್ನು ಉತ್ತಮವಾಗಿ ನಡೆಸಲು ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಹಾಗೂ ರೈತರಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಎಪಿಎಂಸಿಯ ಮಾರುಕಟ್ಟೆಯಲ್ಲಿ ಅಂಗಡಿಗಳಿಗೆ ಸ್ಥಳ ನಿಗದಿಪಡಿಸಿ ನಂಬರ್ ಮೂಲಕ ವ್ಯಾಪಾರ ಸ್ಥರಿಗೆ ಸ್ಥಳ ವಿತರಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದ ಶಾಸಕ ಡಿ.ರವಿಶಂಕರ್ ಶೇಡ್ ನಿರ್ಮಾಣವಾಗಿರುವುದರಿಂದ ವ್ಯಾಪಾರಸ್ಥರು ಗುಡಾರಹೊಡೆಯುವುದು ತಪ್ಪಲಿದೆ ಎಂದರು.
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಜನದಟ್ಟನೆ ಹೆಚ್ಚಾಗಿ ಸಾರ್ವಜನಿಕರು ಮತ್ತು ವಾಹನ
ಸವಾರರು ಸಂಚರಿಸಲು ತೊಂದರೆಯಾಗಿದೆ ಅದಕ್ಕಾಗಿ ಮಾರುಕಟ್ಟೆಯನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ ಶಾಸಕರು ಪೆÇಲೀಸ್ ಇಲಾಖೆಯವರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದನ್ನು ತಡೆಗಟ್ಟು ಮೂಲಕ ವಾರದ ಸಂತೆ ಯಶಸ್ವಿಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಸಂದರ್ಭದಲ್ಲಿ ಸಂಸದರಾಗಿದ್ದ ಸಿ.ಹೆಚ್.ವಿಜಯಶಂಕರ್‍ರವರಿಂದ
ಚುಂಚನಕಟ್ಟೆಯ ಸಂತೆ ಪ್ರಾರಂಭಿಸಲಾಯಿತು. ಅಂದಿನಿದ ಸಂತೆ ಉತ್ತಮವಾಗಿ ನಡೆಯುತ್ತಿದೆ ಇದರ
ಜತೆಗೆ ಅರ್ಜುನಹಳ್ಳಿ ಮತ್ತು ಸಾಲಿಗ್ರಾಮ ಸಂತೆಗಳು ಯಶಸ್ವಿಯಾಗಿ ನಡೆಯುತ್ತಿವೆ, ಪಟ್ಟಣದ ಶುಕ್ರವಾರದ ಸಂತೆ ಹಳೆಯ ಸ್ಥಿತಿಗೆ ಕಳೆಗಟ್ಟುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಆನಂತರ ಶಾಸಕರು ಸಂತೆಯಲ್ಲಿ ಸಂಚರಿಸಿವ್ಯಾಪಾರಸ್ಥರ ಸಮಸ್ಯೆಯನ್ನು ಆಲಿಸಿದಲ್ಲದೆ, ಬೆಲ್ಲ, ತರಕಾರಿ ಸೇರಿದಂತೆ ಹಲವು ಪದಾರ್ಥಗಳನ್ನು ಕೊಂಡುಕೊಂಡರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಎಪಿಎಂಸಿ ಕಾರ್ಯದರ್ಶಿ ಬಿ.ಮಹೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಹೆಚ್.ಪಿ.ಪ್ರಶಾಂತ್,ದೊಡ್ಡಕೊಪ್ಪಲುರವಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಹೆಚ್.ನಾಗೇಂದ್ರ, ಲೋಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾರವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್, ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಶಿವುನಾಯಕ್, ಶಂಕರ್, ಮುಖಂಡರಾದ ಚೌಕಳ್ಳಿಶೇಖರ್, ಪುಟ್ಟರಾಜು, ಆದರ್ಶ, ತಿಮ್ಮಶೆಟ್ಟಿ, ಮಿರ್ಲೆನಾಗರಾಜು, ಕಗ್ಗೆರೆಮಹೇಶ್, ಸರಿತಾಜವರಪ್ಪ, ಬೆಟ್ಟೇಗೌಡ ಮತ್ತಿತರರು ಹಾಜರಿದ್ದರು.