ವಾರದೊಳಗೆ ಶುದ್ದ ಕುಡಿವ ನೀರು ಪೂರೈಕೆಗೆ ಮೇಯರ್ ದರ್ಗಿ ಸೂಚನೆ

ಕಲಬುರಗಿ:ಜು.14: ಒಡೆದು ಹೋದ ನೀರಿನ ಕೊಳವೆ ಮಾರ್ಗಗಳನ್ನು ದುರಸ್ತಿ ಮಾಡಿ, ಒಂದು ವಾರದೊಳಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು? ಎಂದು ಮಹಾನಗರ ಪಾಲಿಕೆ ಮೇಯರ್ ವಿಶಾಲ ದರ್ಗಿ ಅವರು ಸೂಚಿಸಿದರು.

ಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಮಾತನಾಡುತ್ತಾ ನೀರು ಪೂರೈಕೆ ಜಾಲ ನಿರ್ಮಿಸುವ ಹೊಣೆ ಹೊತ್ತ ಎಲ್ ಆಂಡ್ ಟಿ ಕಂಪನಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಏ ಗ ಮ ದ (ಕೆ ಯು ಐ ಡಿ ಎಫ್ ಸಿ) ದುರಸ್ತಿ ಮಾಡಬೇಕು’ ಎಂದರು. ಅಧಿಕಾರಿಗಳು ಸಿಬ್ಬಂದಿಯೊಂದಿಗೆ ನೀರಿನ ಕುರಿತು ಸಭೆ ನಡೆಸಿ ಅವರು ಹೇಳಿದರು.

ಮುಂಗಾರ ಮಳೆ ಕೈಕೊಟ್ಟಿದ್ದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನೀರಿನ ಅಭಾವ ತಗ್ಗಿಸಲು ಕೊಳವೆ ಬಾವಿ ಹಾಗೂ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಪೈಪ್‍ಲೈನ್‍ಗಳಲ್ಲಿ ಕುಲಷಿತ ನೀರು ಸೇರದಂತೆ ಒಡೆದಿರುವ ಪೈಪ್‍ಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು ಎಂದರು.

ಟೆಂಡರ್ ಷರತ್ತಿನ ಪ್ರಕಾರ ಎಲ್ ಅಂಡ್ ಟಿ ಸುಮಾರು 900 ಕಿ.ಮೀ. ಪೈಪ್ ಲೈನ್ ಅಳವಡಿಸಬೇಕಿತ್ತು. ಪ್ರಸ್ತುತ 130 ಕಿ.ಮೀ. ಮಾತ್ರವೇ ಅಳವಡಿಸಲಾಗಿದೆ. 3ನೇ ತನಿಖಾ ತಂಡದಿಂದ ಪರಿವೀಕ್ಷಣೆ ಮಾಡಿಸದೆ ಕಾಮಗಾರಿಯೂ ಮುಗಿಸಲಾಗಿದೆ. ಇದರಲ್ಲಿ ಕೇವಲ 2 ಕಿ.ಮೀ. ಹೈಡ್ರೋಟೆಸ್ಟಿಂಗ್ ಮಾಡಿದ್ದು, ಉಳಿದ ಪೈಪ್‍ಲೈನ್ ಮಾರ್ಗಕ್ಕೆ ಅನುಮತಿ ಹೇಗೆ ನೀಡಲಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು. ಉದ್ದೇಶಿತ ಯೋಜನೆಯು ಐದು ವರ್ಷಗಳಲ್ಲಿ(2025ಕ್ಕೆ) ಪೂರ್ಣಗೊಳ್ಳಬೇಕು. ಆದರೆ, ಇಲ್ಲಿಯವರೆಗೆ ನಗರದ ಯಾವುದೇ ಒಂದು ವಾರ್ಡ್‍ನಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರು.

ಕುಡಿಯುವ ನೀರಿನ ಸಮಸ್ಯೆ, ಪೈಪ್‍ಲೈನ್ ದುರಸ್ತಿ ಕಾಮಗಾರಿಗೆ ಕಾರ್ಯ ಕಾಮಗಾರಿಗೆ ಸಂಬಂಧಿಸಿದ ನ್ಯನತೆಗಳ ಬಗ್ಗೆ ಶ್ರೀಘ್ರವೇ ಉಪ ಮೇಯರ್, ವಿರೀಧ ಪಕ್ಷದ ನಾಯಕರು, ಪಾಲಿಕೆ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ಮಾಡಲಾಗುವುದು, ನ್ಯೂನತೆಗಳು ಕ0ಡುಬ0ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು, ಎಸ್ ಅಂಡ್ ಟಿ ಏಜೆನ್ಸಿಯನ್ನು ರದ್ದುಗೊಳಿಸಿ ಬೇರೆಯವರಿಗೆ ಕೊಡಲಾಗುವುದು. ಎಂದು ಎಚ್ಚರಿಸಿದರು.

ಈ ಸಭೆಯಲ್ಲಿ ಉಪಮೇಯರ್ ಶಿವಾನಂದ ಪಿಸ್ತಿ, ನಗರ ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜನಿಯರ್ ಕಾಂತರಾಜ್, ಇಇ(ಅಭಿವೃದ್ಧಿ ಕೆ.ಎಸ್. ಪಾಟೀಲ, ಇಇ ಶಿವಕುಮಾರ, ಪ್ರಧಾನ ವ್ಯವಸ್ಥಾಪಕ ಸಂಜಯ್ ಕುಮಾರ್ ಸೇರಿದಂತೆ ಸಿಬ್ಬಂದಿ ಇದ್ದರು.