ವಾರದೊಳಗೆ ವಿದ್ಯುತ್ ಸಮಸ್ಯೆ ನಿವಾರಿಸದಿದ್ದರೆ ಉಗ್ರಹೋರಾಟ

ರಾಯಚೂರು,ಅ.೧೦- ಗ್ರಾಮೀಣ ಭಾಗದಲ್ಲಿ ೨೪/೭ ವಿದ್ಯುತ್ ನೀಡಬೇಕು ಎಂದು ಆದೇಶವಿದೆ ಆದರೆ ಕಳೆದ ಒಂದು ವಾರದಿಂದ ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯತ್ ತೆಗೆಯುತ್ತಿದ್ದಾರೆ ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತದೆ ಈ ಬಗ್ಗೆ ಶಾಸಕ ಬಸನಗೌಡ ದದ್ದಲ್ ಅವರ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.ಆದ್ದರಿಂದ ಒಂದು ವಾರದೊಳಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ನಿಜಾಮುದ್ದೀನ್ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ರಾತ್ರಿ ೧೨ ಗಂಟೆಗೆ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುತ್ತಿದ್ದಾರೆ. ಈ ಸಮಯದಲ್ಲಿ ಹೇಗೆ ಹೊಲಗಳಿಗೆ ನೀರು ಕಟ್ಟಬೇಕು ಎಂದರು.ಅಧಿಕಾರಿಗಳು ೧೨ ತಾಸ್ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಆದರೆ ಅವರು ನೀಡುತ್ತಿರುವುದು ಕೇವಲ ೪ ತಾಸ್ ಮಾತ್ರ ಅಧಿಕಾರಿಗಳು ಸುಳ್ಳು ಹೇಳುವುದನ್ನು ಬಿಡಬೇಕು. ಈ ವರ್ಷ ಮುಂಗಾರು ಬೆಳೆ ಸಂಪೂರ್ಣ ಕೈ ಕೊಟ್ಟಿರುವುದರಿಂದ ರೈತರು ಕಂಗಾಲು ಆಗಿದ್ದಾರೆ.೨೪/೭ ವಿದ್ಯುತ್ ನೀಡಬೇಕು ಎಂದು ಕೆಪಿಸಿಎಲ್ ಆದೇಶವಿದೆ ಆದರೆ ಕಳೆದ ಒಂದು ವಾರದಿಂದ ಸಂಜೆ ೬ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ವಿದ್ಯುತ್ ನ್ನು ಸಂಪೂರ್ಣ ತೆಗೆಯುತ್ತಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.ಆರ್.ಟಿಪಿಎಸ್ ವೈ.ಟಿ.ಪಿ.ಎಸ್ ನಮ್ಮ ತಾಲ್ಲೂಕಿನಲ್ಲಿ ಇದ್ದರೂ ಕೂಡ ವಿದ್ಯುತ್ ನಿಂದ ವಂಚಿತ ರಾಗುತ್ತಿದ್ದೇವೆ.ಪ್ರತಿ ದಿನ ರಾಜ್ಯದಲ್ಲಿ ೪ ಸಾವಿರ ಮೆಗವ್ಯಾಟ್ ವಿದ್ಯುತ್ ನ್ನು ಹೊರಗಡೆಯಿಂದ ಖರೀದಿ ಮಾಡುತ್ತಿದ್ದಾರೆ.ಆದರೆ ಅದು ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ.ಕೂಡಲೇ ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ವೈ.ಟಿ.ಪಿ.ಎಸ್ ಖಾಸಗೀಕರಣ ಮಾಡುವುದಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಗಮನಕ್ಕೆ ಬಂದಿದೆ.ಇದನ್ನು ಕೂಡಲೇ ಕೈಬಿಡಬೇಕು.ಇದನ್ನು ಸರ್ಕಾರವೇ ನಿಯಂತ್ರಣ ಮಾಡಬೇಕು.ಶಾಸಕ ಬಸನಗೌಡ ದದ್ದಲ್ ಅವರು ಇವತ್ತೇ ಇಂಧನ ಸಚಿವರೊಂದಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಯಾಗದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು.ಒಂದು ವಾರದೊಳಗೆ ಸಮಸ್ಯೆಯನ್ನು ನಿವರಿಸದಿದ್ದಾರೆ ಉಗ್ರ ಹೋರಾಟದ ರುಪರೋಷಗಳ ಸಿದ್ಧಪಡಿಸಿ ರೈತರು,ವಿದ್ಯಾರ್ಥಿ ಗಳ ಪಾಲಕರೊಂದಿಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.