ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್

ಕೆ.ಆರ್.ಪೇಟೆ. ಮೇ.20: ತಾಲೂಕಿನಲ್ಲಿ 30 ಪ್ರತಿಶತ ಕೋವಿಡ್ ಪಾಸಿಟಿವಿಟಿ ದರ ಇದ್ದು ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ದಾರೆ.
ಅವರು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು ಮಂಗಳವಾರ, ಶುಕ್ರವಾರ, ಭಾನುವಾರಗಳಂದು ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ ಸೋಮವಾರ, ಬುಧವಾರ, ಗುರುವಾರ, ಶನಿವಾರ ಈ ದಿನಗಳಲ್ಲಿ ಕೇವಲ ಮೆಡಿಕಲ್ ಸ್ಟೋರ್‍ಗಳು ಮತ್ತು ಹಾಲಿನ ಕೇಂದ್ರಗಳು ಮಾತ್ರ ತೆರೆದಿರುತ್ತವೆ. ತಳ್ಳುಗಾಡಿಗಳಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಂಟೋನ್ಮೆಂಟ್ ವಲಯಗಳಲ್ಲಿ ಎಚ್ಚರ
ತಾಲೂಕಿನಲ್ಲಿ 25 ಗ್ರಾಮಗಳನ್ನು ಕಂಟೋನ್ಮೆಂಟ್ ವಲಯಗಳೆಂದು ಘೋಷಿಸಲಾಗಿದೆ. ನಾಲ್ಕಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಇರುವ 36 ಗ್ರಾಮಗಳನ್ನು ಮೈಕ್ರೋ ಕಂಟೋನ್ಮೆಂಟ್ ವಲಯಗಳೆಂದು ಗುರುತಿಸಲಾಗಿದೆ. ಕಂಟೋನ್ಮೆಂಟ್ ವಲಯಗಳಲ್ಲಿ ಮುಂದಿನ 28 ದಿನಗಳ ಕಾಲ ಪಾಸಿಟಿವ್ ಇಲ್ಲದಿದ್ದರೆ ಆ ಗ್ರಾಮವನ್ನು ಕಂಟೋನ್ಮೆಂಟ್ ವಲಯ ರಹಿತ ಎಂದು ಘೋಷಿಸಲಾಗುವುದು. ಈ ಗ್ರಾಮಗಳಿಗೆ ಮದುವೆ, ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿμÉೀಧಿಸಿದೆ. ಈ ಗ್ರಾಮಗಳ ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಗೆ ಗ್ರಾಮಗಳಿಗೆ ತೆರಳಿ ವಿತರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಲಸಿಕೆ ಪಡೆಯಿರಿ
45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು 18 ವರ್ಷದ ಮೇಲ್ಪಟ್ಟು ಸರ್ಕಾರದಿಂದ ಲಭ್ಯತೆಯ ಆಧಾರದ ಮೇಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕೆ ಆರ್ ಪೇಟೆ ಇಲ್ಲಿ ಸ್ಥಳ ನಿಗದಿಗೊಳಿಸಲಾಗಿದೆ.
ರೋಗ ಲಕ್ಷಣಗಳಿದ್ದರೆ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ ಜ್ವರ, ಕೆಮ್ಮು ಮುಂತಾದ ರೋಗಲಕ್ಷಣಗಳು ಇರುವವರು ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು.ಹಲವಾರು ಜನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು.
ಸೋಂಕಿನ ಲಕ್ಷಣಗಳಿದ್ದ ಚಿಕಿತ್ಸೆ ಪಡೆಯಿರಿ
ಸಾವಿನ ಪ್ರಮಾಣವನ್ನು ತಗ್ಗಿಸಲು ಸೋಂಕಿತರು ಲೇಟಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದೇ ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ. ್ಲ ಸೋಂಕಿನ ಲಕ್ಷಣಗಳು ಕಂಡಕೂಡಲೇ ಖಾಸಗಿ ಕ್ಲಿನಿಕ್‍ಗಳಲ್ಲಿ ಚಿಕಿತ್ಸೆ ಪಡೆದು ನಂತರ ತೊಂದರೆಯಲ್ಲಿದ್ದಾಗ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗುತ್ತಿರುವ ಸಂಖ್ಯೆ ಅಧಿಕವಾಗಿದ್ದು. ಕೊನೆಯ ಹಂತದಲ್ಲಿ ಅವರಿಗೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಆದ್ದರಿಂದ ಸೋಂಕಿನ ಲಕ್ಷಣ ಕಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಬ್ಯಾಂಕ್ ಬಳಿ ಸಾಮಾಜಿಕ ಅಂತರ ಮಾಯ
ಪಟ್ಟಣದ ಬ್ಯಂಕುಗಳ ಬಳಿ ಯಾವಾಗಲೂ ಗ್ರಾಹಕರು ಗುಂಪಾಗಿ ನಿಂತಿರುತ್ತಾರೆ. ಸಮಾಜಿಕ ಅಂತರ ಕಾಪಾಡಿಕೊಂಡು ಹಣವನ್ನು ಪಡೆ ಯಬೇಕೆಂದು ಮನವಿ ಮಾಡಿದ ಅವರು ಬ್ಯಾಂಕ್ ಮಿತ್ರ ಯೋಜನೆಯ ಮೂಲಕ ಹಣವನ್ನು ಗ್ರಾಮಗಳಿಗೆ ತೆರಳಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಬ್ಯಾಂಕಿನ ಮೇನೇಜರ್‍ಗಳ ಜೊತೆ ಮಾತನಾಡಲಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಆಕ್ರೋಶ
ತಾಲೂಕಿನಾದ್ಯಂತ ಲಾಕ್ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಕಿರುಕುಳ ಹೆಚ್ಚಾಗುತ್ತಿದೆ ಎಂಬ ಆರೋಪವಿದ್ದು ಇಪ್ಪತ್ತರಿಂದ ಮೂವತ್ತು ಜನರ ಗುಂಪನ್ನು ಸೇರಿಸಿಕೊಂಡು ಒಂದು ಕಡೆ ಮಾಡುತ್ತಿರುವುದರಿಂದ ಹೆಚ್ಚಳವಾಗುತ್ತಿದೆ ತಾಲೂಕಿನಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳು ಹಣವನ್ನು ಸಾರ್ವಜನಿಕರಿಂದ ಬಲವಂತವಾಗಿ ವಸೂಲಿ ಮಾಡುವಂತಿಲ್ಲ ಕಂಟೋನ್ಮೆಂಟ್ ವಲಯಗಳಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಪ್ರವೇಶಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದೀಪಕ್, ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್ ಹಾಜರಿದ್ದರು.