ವಾರಣಾಸಿಯ ಕಾಶಿ ಪೀಠದ ಶ್ರೀಗಳಿಂದ ನಾಗರಾಜ್ ಲೋಕಿಕೆರೆಗೆ ಆಶೀರ್ವಾದ

ದಾವಣಗೆರೆ.ಮೇ.4; ವಾರಣಾಸಿಯ ಕಾಶಿ ಪೀಠದ 1008 ಜ್ಞಾನ ಸಿಂಹಾಸನದೀಶ್ವರ ನೂತನ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಮಹಾಸ್ವಾಮಿಗಳನ್ನು   ದಾವಣಗೆರೆ ನಗರದಲ್ಲಿ  ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಭೇಟಿ ನೀಡಿ ಗುರುಗಳ ಕೃಪಾಶಿರ್ವಾದ ಪಡೆದರು.ಖಾಸಗಿ ಕಾರ್ಯಕ್ರಮ ನಿಮಿತ್ತ  ನಗರಕ್ಕಾಗಮಿಸಿದ್ದ ವೇಳೆ ನಾಗರಾಜ್ ಲೋಕಿಕೆರೆ ಅವರು ಭೇಟಿ ಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎ. ಮುರುಗೇಶ್ ಸೇರಿದಂತೆ ಇತರರು ಇದ್ದರು.