ವಾರಕ್ಕೊಮ್ಮೆ ಸ್ನಾನ; ಕಲುಷಿತ ನೀರು ಸೇವನೆ ಅಸ್ವಸ್ಥಗೊಂಡ ಕಸ್ತುರಬಾ ವಿದ್ಯಾರ್ಥಿನಿಲಯದ ಮಕ್ಕಳು

ಕೆಂಭಾವಿ:ಅ.1:ಕಲುಷಿತ ನೀರು ಸೇವಿಸಿ ಸುಮಾರು 29 ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಪಟ್ಟಣ ಸಮೀಪದ ಯಕ್ತಾಪೂರ ಗ್ರಾಮದ ಕಸ್ತುರಬಾ ಬಾಲಿಕಾ ವಸತಿ ನಿಲಯದಲ್ಲಿ ಶನಿವಾರ ನಡೆದಿದೆ.

ಶನಿವಾರ ಬೆಳಿಗ್ಗೆ ಯಕ್ತಾಪುರ ಗ್ರಾಮದ ಕಸ್ತುರಬಾ ವಿದ್ಯಾರ್ಥಿನಿಲಯದ ಮಕ್ಕಳು ನಿಲಯದಲ್ಲಿ ಚಹಾ ಬಿಸ್ಕತ್ ಸೇವಿಸಿ ಗ್ರಾಮದ ಸರಕಾರಿ ಶಾಲೆಗೆ ಮಕ್ಕಳು ಹಾಜರಾಗಿದ್ದಾರೆ. ಈ ಮೇಳೆ ವಿದ್ಯಾರ್ಥಿನಿಯೋರ್ವಳು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಘಟನೆ ನಡೆದಿದೆ. ತಕ್ಷಣ ಶಾಲೆಯ ಶಿಕ್ಷಕರು ಕಸ್ತುರಬಾ ವಸತಿ ನಿಲಯದ ಮೇಲ್ವಿಚಾರಕರ ಗಮನಕ್ಕೆ ತರುತ್ತಾರೆ. ಅದೇ ಸಂದರ್ಭದಲ್ಲಿ ಹಲವು ವಿದ್ಯಾರ್ಥಿನಿರಲ್ಲಿ ಹೊಟ್ಟೆನೋವು ವಾಂತಿ ಬೇದಿ ಕಾಣಿಸಿಕೊಳ್ಳಲಾಗಿ, ತಕ್ಷಣ ಅಸ್ವಸ್ಥಗೊಂಡ ಮಕ್ಕಳನ್ನು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಒಳಪಡಿಸಿದ್ದು, ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನುಳಿದ ಮಕ್ಕಳನ್ನು ಯಕ್ತಾಪುರದ ಗುತ್ತಿಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ಅಧಿಕಾರಿಗಳ ಭೇಟಿ;
ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಾ. ಸುಶಿಲಾ ಬಿ. ಜಿಪಂ ಸಿಇಓ ಗರೀಮಾ ಪನ್ವಾರ್, ಸೇರಿದಂತೆ ಅಧಿಕಾರಿಗ ತಂಡ ಯಕ್ತಾಪೂರ ಗ್ರಾಮದ ಕಸ್ತುರಬಾ ವಸತಿ ನಿಲಯ, ಗುತ್ತಿಬಸವೇಶ್ವರ ಹಾಗೂ ಕೆಂಭಾವಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳ ಆರೋಗ್ಯ ವಿಚಾರಿಸಿ ಸಮಸ್ಯ ಆಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ, ಪ್ರಭುಲಿಂಗ ಮಾನ್ಕರ್, ಯಾದಗಿರಿ ಡಿಡಿಪಿಐ ಮಂಜುನಾಥ, ತಾಲೂಕು ವೈದ್ಯಾಧಿಕಾರಿ ಆರ್. ವಿ ನಾಯಕ್, ಸುರಪುರ ತಹಸೀಲ್ದಾರ ಕೆ. ವಿಜಯಕುಮಾರ, ತಾಲೂಕು ಪಂಚಾಯತ್ ಇಓ ಸೇರಿದಂತೆ ಇತರರು ಇದ್ದರು.

ವಾರಕ್ಕೊಮ್ಮೆ ಸ್ನಾನ:
ಕಲುಸಿತ ನೀರಿನಿಂದ ಕೆಂಭಾವಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಡಿ.ಸಿ ಸುಶೀಲಾ. ಬಿ ರವರು ಮಾತನಾಡಿಸಿ ವಿಚಾರಿಸಲಾಗಿ , ವಿದ್ಯಾರ್ಥಿನಿ ನಮಗೆ ಸ್ನಾನಕ್ಕೆ ನೀರಿಲ್ಲ. ವಾರಕ್ಕೊಮ್ಮೆ ಜಳಕ ಮಾಡ್ತಿವ್ರಿ, ಎಂದಾಗ ಡಿಸಿಯರು ಒಂದು ಕ್ಷಣ ದಂಗಾದ ಸನ್ನಿವೇಶ ನಡೆಯಿತು.

ಕಲುಷಿತ ನೀರೇ ಕಾರಣ:
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಾರಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಮಕ್ಕಳು ಕಲುಸಿತ ನೀರು ಸೇವನೆಯಿಂದ ಈ ಘಟನೆಗೆ ಕಾರವಾಗಿದೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.


ವಸತಿ ನಿಲಯದ ಮಕ್ಕಳ ಪಾಲಕರು ಯಾವುದೇ ಆತಂಕ ಪಡಬೇಕಾಗಿಲ್ಲ, ತೆರೆದ ಹಾಗೂ ಕೊಳವೆಭಾವಿ ನೀರನ್ನು ಪರೀಕ್ಷೆಗೆ ಕಳಿಸಲಾಗಿದ್ದು, ವಿದ್ಯಾರ್ಥಿನಿಯರಿಗೆ ಶುದ್ಧ ನೀರಿನ ವ್ಯವವಸ್ಥೆ ತಕ್ಕಣ ಮಾಡಲಾಗುವುದು.

ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ