ವಾಯು ವಿಕಾರಗಳ ಅಸಮತೋಲನ ನಮ್ಮ ಅನಾರೋಗ್ಯಕ್ಕೆ ಕಾರಣ-ಡಾ.ಹಂದ್ರಾಳ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ27: ನಮ್ಮ ದೇಹದ ವಾಯುವಿಕಾರಗಳ ಅಸಮತೋಲನ ನಮ್ಮ ಅನಾರೋಗ್ಯಕ್ಕೆ ಕಾರಣವಾಗಲಿದ್ದು ಅವುಗಳನ್ನು ನಿರಂತ್ರಣ ಹಾಗೂ ಸುಸ್ಥಿತಿಯಲ್ಲಿಡುವುದು ಅಗತ್ಯವಾಗಿದೆ ಎಂದು ಖ್ಯಾತ ವೈದ್ಯ ಹಾಗೂ ಪತಂಜಲಿ ಯೋಗಸಮಿತಿಯ ರಾಜ್ಯ ಪ್ರಭಾರಿ ಮತ್ತು ಗದಗ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.
ಹೊಸಪೇಟೆಯ ಫ್ರೀಡಂ ಪಾರ್ಕ್‍ನಲ್ಲಿ ಭಾನುವಾರ ಬೆಳಿಗ್ಗೆ ಪತಂಜಲಿ ಯೋಗ ಸಮಿತಿ, ಜನನಿ ವಿವಿದ್ದೋದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿ ಶಿಬಿರದಲ್ಲಿ ಪಂಚವಾಯುಗಳು ಮಹತ್ವದೊಂದಿಗೆ ಹಮ್ಮಿಕೊಂಡಿ ಮಾಸಿಕ ತರಬೇತಿಯಲ್ಲಿ ನಮ್ಮ ಶರೀರದ ಪಂಚವಾಯುಗಳಾದ ಅಪಾನ, ಸಮಾನ, ಉದಾನ, ಪಚನ ಹಾಗೂ ಪ್ರತ್ಯಾರಗಳ ಅಸಮತೋಲನ ಶರೀರವನ್ನು ಬಳಲುವಂತೆ ಮಾಡುತ್ತದೆ ಇದನ್ನು ಸರಿಪಡಿಸಿಕೊಳ್ಳಲು ಆಹಾರ ಪದ್ದ, ಪಚನಕ್ರೀಯೆ ಸರಿಪಡಿಸಿಕೊಂಡು ಇವುಗಳಿಂದ ಮುಕ್ತಹೊಂದಲು ಸಾಧ್ಯ ನಿಗದಿತ ಸಮಯಕ್ಕೆ ತಕ್ಕಂತೆ ಕ್ರೀಯೆ ನಮ್ಮ ನರನಾಡಿಗಳು ಕ್ರೀಯಾಶೀಲವಾಗಿಡುವಂತೆ ಮಾಡುತ್ತದೆ ಎಂದರು.
ಯೋಗ ಧ್ಯಾನ, ಪ್ರಾಣಾಯಾಮಗಳು ನಮ್ಮ ದೇಹದ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ ಎಂದರು. ನಮ್ಮ ದೇಹ, ಆರೋಗ್ಯ ಹಾಗೂ ಮನಸ್ಸಿನ ಶುದ್ಧಿಗಾಗಿ ನಮಗಾಗಿ ಒಂದು ತಾಸು ಮುಸಲಿಡುವುದು ಸೂಕ್ತವಾಗಿದೆ ಎಂದು ಪ್ರತಿಯೊಬ್ಬರು ಯೋಗಿಗಳಾಗಿ ನಿರೋಗಿಗಳಾಗಿರುವಂತೆ ಮಾರ್ಗದರ್ಶನ ಮಾಡಿದರು.
ಪತಂಜಲಿ ಯೋಗ ಸಮಿತಿಯ ಡಾ.ಎಫ್.ಟಿ.ಹಳ್ಳಿಕೇರಿ, ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ, ಬಾಲಚಂದ್ರ ಶರ್ಮಾ, ಅಶೋಕ ಚಿತ್ರಗಾರ, ಮಂಗಳಮ್ಮ, ಚಂದ್ರಿಕಾಶ್ರೀರಾಮ, ಶ್ರೀರಾಮ, ಪತ್ರಕರ್ತ ಪಿ.ಸತ್ಯನಾರಾಯಣ ಅನಂತ ಜೋಶಿ ಸೇರಿದಂತೆ ನೂರಾರು ಯೋಗಾಶಕ್ತರು ಪಾಲ್ಗೊಂಡು ಪ್ರಯೋಜನ ಪಡೆದರು.
ವಾಣಜ್ಯಕ್ಷೇತ್ರದಲ್ಲಿ ಸಾಧನೆ ಮಾಡಿ ಪುರಸ್ಕಾರಕ್ಕೆ ಭಾಜನರಾದ ಹೆಚ್.ಶ್ರೀನಿವಾಸ, ಡಾ.ಎಸ್.ಬಿ.ಹಂದ್ರಾಳರನ್ನು ಸನ್ಮಾನಿಸಲಾಯಿತು. ಹೊಸದಾಗಿ ಆರಂಭವಾದ ಕೊಂಡನಾಯ್ಕನಹಳ್ಳಿ ಕೇಂದ್ರಕ್ಕೆ ಮೈಕು ದೇಣಿಗೆಯಾಗಿ ಇದೆ ಸಂದರ್ಭದಲ್ಲಿ ನೀಡಲಾಯಿತು.

One attachment • Scanned by Gmail