ವಾಯುವಿಹಾರಿಗಳ ಮನ ಸೆಳೆದ ನಾಗರಾಜ್ ಲೋಕಿಕೆರೆ

ದಾವಣಗೆರೆ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಪ್ರತಿ ದಿನವೂ ಮುಂಜಾನೆಯೇ ವಾಯುವಿಹಾರಿಗಳ ಬಳಿ ಮತಯಾಚಿಸಿ ಮನ ಸೆಳೆದರು.ಪ್ರತಿದಿನ ಮುಂಜಾನೆಯೇ ವಾಯು ವಿಹಾರಿಗಳ ಭೇಟಿ ಮಾಡಿ ಅವರೊಂದಿಗೆ ಟೀ, ಕಾಫಿ ಸವೆದು ಆತ್ಮೀಯವಾಗಿ ಮಾತನಾಡಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮಗೆ ಮತನೀಡಿ ಜಯಶೀಲರನ್ನಾಗಿಸುವಂತೆ ವಾಯು ವಿಹಾರಿಗಳ ಬಳಿ ಮತಯಾಚಿಸಿದರು.ಅಂತೆಯೇ ಇಂದು ಮುಂಜಾನೆ ಕುಂದವಾಡ ಕೆರೆ, ಇನ್ ಡೋರ್ ಸ್ಟೇಡಿಯಂ, ಮಾತೃ ಛಾಯಾ ಪಾರ್ಕ್ ಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪ್ರಮುಖರು, ಯುವಮೋರ್ಚಾ ಕಾರ್ಯಕರ್ತರ ಜೊತೆಗೂಡಿ ಸುತ್ತಾಡಿ ತಾವೂ ವಾಯು ವಿಹಾರ ಮಾಡುತ್ತಾ ವಾಯು ವಿಹಾರಕ್ಕೆ ಬರುವ ಹಿರಿಯ ನಾಗರಿಕರು, ಮತದಾರರ ಜೊತೆಗೆ ಟೀ, ಕಾಫಿ ಸವೆದು ಕುಶಲೋಪರಿ ಆಲಿಸುತ್ತಾ ಮತಯಾಚಿಸಿದರು. ಇಂದು ಸುಮಾರು 600 ರಿಂದ 800 ಮಂದಿ ವಾಯುವಿಹಾರಿಗಳ ಭೇಟಿ ಮಾಡಿದರು.ಈ ವೇಳೆ ನಾಗರಾಜ್ ಲೋಕಿಕೆರೆ ಅವರಿಗೆ ವಾಯುವಿಹಾರಿಗಳು ಪ್ರತಿ ಸ್ಪಂದನೆ ನೀಡಿದರಲ್ಲದೇ, ಅತ್ತ ಸಾಗಿದಾಗ ನಾಗರಾಜ್ ಲೋಕಿಕೆರೆ ಅವರ ವ್ಯಕ್ತಿತ್ವ, ಸರಳತೆ ಮತ್ತು ಜನಸ್ನೇಹಿ, ಜನಪರ ಕಾಳಜಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದವು. ಮುಂದಿನ ದಿನಮಾನಗಳಲ್ಲಿ ಉತ್ತರ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕರಾಗಿರುವ ಎಸ್.ಎ. ರವೀಂದ್ರನಾಥ್ ಅವರಂತೆ ಜನರ ಮನಸ್ಸಲ್ಲಿ ನೆಲೆ ನಿಲ್ಲುತ್ತಾರೆ ಎಂಬ ಶುಭ ಹಾರೈಕೆ ವ್ಯಕ್ತವಾಯಿತು.ನಾಗರಾಜ್ ಲೋಕಿಕೆರೆ ಅವರೊಂದಿಗೆ ನಗರ ಪಾಲಿಕೆ ಸದಸ್ಯರಾದ ಶಿಲ್ಪಾ ಜಯಪ್ರಕಾಶ್, ಮುಖಂಡರುಗಳಾದ ಮಂಜುನಾಥ್ ಡಿ ಬಿಳಿಚೋಡು, ಉಮೇಶ್ ಎಲವಟ್ಟಿ, ಟಿ.ಎಂ. ಉಮಾಪತಯ್ಯ, ವಿ.ಟಿ. ಹನುಮೇಗೌಡ, ಬಿ. ಆನಂದ್, ಉಮೇಶ್, ಆಲೂರು ಜಯಣ್ಣ, ಕೊಟ್ರೇಶಣ್ಣ, ಚೇತನ್ ಕನ್ನಡಿಗ ಸೇರಿದಂತೆ ಇತರರು ಮತ ಪ್ರಚಾರ ನಡೆಸಿದರು.