ವಾಯುಮಾಲಿನ್ಯ: ೧೨ರಂದು ಶಕ್ತಿನಗರ ಬಂದ್

ರಾಯಚೂರು,ಜ.೮- ಶಕ್ತಿನಗರದ ಆರ್ ಟಿಪಿಎಸ್ ಮತ್ತು ವೈಟಿಪಿಎಸ್ ನಿಂದ ಹೋರಸೂಸುವ ಹಾರೂಬೂದಿಯಿಂದ ವಿಪರೀತ ವಾಯುಮಾಲಿನ್ಯ ಉಂಟಾಗುತ್ತಿದ್ದು, ಕಂಪನೆ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇದೇ ಜ.೧೨ರಂದು ಶಕ್ತಿನಗರ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಶಕ್ತಿನಗರ ಉಳಿಸಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರಾಯಚೂರು ತಾಲೂಕಿನ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಶಕ್ತಿನಗರ, ಚಿಕ್ಕಸೂಗೂರು ಕಲ್ಲಿದ್ದಲುನಿಂದ ವಿದ್ಯುತ್ ಉತ್ಪಾದನೆಯಿಂದ ಹೊರಸೂಸುವ ಹಾರುಬೂದಿ, ತಳಬದಿಯಿಂದ ಬೂದಿ ಹೊತ್ತೊಯ್ಯುವ ತೆರೆದ ವಾಹನಗಳಿಂದ ವಾಯುಮಾಲಿನ್ಯ ಉಂಟಾಗಿ ಪಿ.ಎಂ. ೨.೫ , ಸೂಕ್ಷ್ಮ ದೂಳಿನ ಕಣಗಳು ರಾಷ್ಟ್ರೀಯ ಮಿತಿಗಿಂತ ಅತ್ಯಧಿಕ ವಾಯುಮಾಲಿನ್ಯ, ಜಲಮಾಲಿನ್ಯ ಸುತ್ತಲಿನ ಪರಿಸರವನ್ನು ತಪಾಸಣಾ ಉಪಕರಣಗಳಿಂದ ಪರೀಕ್ಷೆ ಮಾಡಿಸಿ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು. ಏಕೆಂದರೆ ೪೦ ವರ್ಷದ ಹಿಂದೆ ಕೆಪಿಸಿಎಲ್ ಸ್ಥಾಪನೆಯಾಗಿ ಸುತ್ತಲಿನ ೨೦ ಕಿ.ಮೀ. ಅಂತರದಲ್ಲಿರುವ ಗ್ರಾಮಗಳನ್ನು ದತ್ತು ಪಡೆಯದೆ ನಿಗಮದ ಜವಾಬ್ದಾರಿಗಳನ್ನು ಮರೆತು, ಆರೋಗ್ಯದ ಮೇಲೆ ಹಾರುಬೂದಿಯಿಂದ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದರು ಸಹ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಅನ್ನದೆ , ನಿರ್ಲಕ್ಷ್ಯ ತೋರಿ ಸಾರ್ವಜನಿಕರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ. ಆದ್ದರಿಂದ ಈ ಕಂಪನಿಯ ವಿರುದ್ಧ ಇದೇ ಜ.೧೨ರಂದು ಶಕ್ತಿನಗರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಿತಿಯ ಪ್ರಕಾರ ಒಂದು ಸಾವಿರ ಲೀಟರ್ ಗಾಳಿಯಲ್ಲಿ ೨೪ ಗಂಟೆಯಲ್ಲಿ ೬೦ ಮೈಕ್ರೋ ಗ್ರಾಂ ಒಳಗೆ ಪಿ.ಎಂ. ೨.೫ ದಾಖಲಾದರೆ ಆರೋಗ್ಯದ ಮೇಲೆ ಹಚ್ಚಿನ ದುಷ್ಪರಿಣಾಮ ಬೀರದು, ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ದಿನದ ೨೪ ಗಂಟೆಗಳು ದೂಳಿನಿಂದ ಕೂಡಿರುತ್ತದೆ ಹಾರುಬೂದಿ, ಹೊಂಡಬೂದಿ ಹೊತ್ತೊಯ್ಯುವ ಸಾವಿರಾರು ತೆರೆದ ವಾಹನಗಳು ಹಾಗೂ ಲಕ್ಷಾಂತರ ದೈತ್ಯಾಕಾರದ ವಾಹನಗಳಿಂದ ಸದ ಸಂಚಾರ ದಟ್ಟಣೆ ಕೂಡಿರುತ್ತದೆ . ಈ ರಸ್ತೆಯ ಮುಖಾಂತರ ಲಕ್ಷಾಂತರ ವಾಹನಗಳು ಹಾದು ಹೋಗುತ್ತವೆ ರಸ್ತೆಯ ಪಕ್ಕದಲ್ಲಿ ಬಡಜನರು ವಾಸಿಸುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದು, ಸಾರ್ವಜನಿಕರ ಪ್ರಾಣ ಉಳಿಸಿ , ಕಂಪನಿ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಪ್ಪ, ರಮಜಾನ್ ಸಾಬ್, ಪರಶುರಾಂ, ನಾಗಪ್ಪ, ಅಂಜನೇಯ, ಮುನೀರ್, ಮೈನುದ್ದೀನ್, ಮಹ್ಮದ್ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.