ವಾಯುಮಾಲಿನ್ಯ ಹೆಚ್ಚಳ ಗೋವಾಕ್ಕೆ ತೆರಳಿದ ಸೋನಿಯಾ

ನವದೆಹಲಿ, ನ 20- ರಾಜಧಾನಿ‌ ದೆಹಲಿಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ವಾಯುಮಾಲಿನ್ನವೂ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕಡಲ ತಡಿ ಗೋವಾಕ್ಜೆ ವರ್ಗಾವಣೆಯಾಗಿದ್ದಾರೆ.
ವೈದ್ಯರು ಸಲಹೆ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗೋವಾಕ್ಕೆ ತೆರಳಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ನ ಹೆಚ್ಚಾಗುತ್ತಿದ್ದು ಇದರಿಂದ ಅಷಾಯವಾಗಲಿದೆ. ನೀವು ಮೊದಲು ದೆಹಲಿ ತೊರೆಯುವಂತೆ ವೈದ್ಯರು ಎಚ್ಚರಿಕೆ ನೀಡಿದ್ದರು.
ಸೋನಿಯಾ ಗಾಂಧಿ ಶ್ವಾಸಕೋಶದ ಸಮಸ್ಯೆಯೂ ಸೇರಿದಂತೆ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ‌. ವಾಯು ಮಾಲಿನ್ಯವು ಶ್ವಾಸಕೋಶದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವುದರಿಂದ ವೈದ್ಯರು ಸೋನಿಯಾ ಗಾಂಧಿ ಅವರಿಗೆ ದೆಹಲಿಯಿಂದ ಹೊರಗಡೆ ಹೋಗುವಂತೆ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರುತ್ತದೆ. ಅದೇ ರೀತಿ ಈ ವರ್ಷವೂ ವಿಪರೀತವಾಗಿದೆ. ಈ ಸಂದರ್ಭದಲ್ಲಿ ವಾಯು ಮಾಲಿನ್ಯದಿಂದ ದೆಹಲಿಯಲ್ಲಿ ಕೆಮ್ಮು, ಆಸ್ತಮಾ ಪ್ರಕರಣಗಳು ಹೆಚ್ಚಾಗುವುದು ಸಾಮಾನ್ಯವಾಗಿದೆ.