ವಾಯುಭಾರ ಕುಸಿತದಿಂದ ಅಕಾಲಿಕ ಮಳೆ


ಹೊನ್ನಾಳಿ.ನ.೧೮; ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ತಾಲೂಕಿನ ವಿವಿಧೆಡೆ ಉತ್ತಮ ಮಳೆ ಸುರಿಯಿತು. ತಾಲೂಕಿನ ತಿಮ್ಮೇನಹಳ್ಳಿ, ಕೆಂಗಲಹಳ್ಳಿ, ಮುಕ್ತೇನಹಳ್ಳಿ, ಕೂಲಂಬಿ, ಕುಂದೂರು ಮತ್ತಿತರ ಭಾಗಗಳಲ್ಲಿ ಸೋಮವಾರ ಸುರಿದ ಮಳೆಗೆ ರೈತರು ಚಿಂತಾಕ್ರಾಂತರಾಗಿದ್ದಾರೆ.
ನ.೬ರಿಂದ ಬಂದಿರುವ ವಿಶಾಖ ಮಳೆ ವಿಪರೀತವಾಗಿ ಸುರಿಯುತ್ತಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗಳ ಕಟಾವು ಪ್ರಗತಿಯಲ್ಲಿದ್ದು, ಸುರಿಯುವ ಮಳೆಯಿಂದ ಧಾನ್ಯಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ.
ಮಳೆ ನಿಂತರೆ ಸಾಕು ಎಂದು ರೈತರು ದೇವರಲ್ಲಿ ಮೊರೆ ಇಡುತ್ತಿದ್ದಾರೆ.