ವಾಯದಾಳಿ; 300 ಉಗ್ರರು ಹತ್ಯೆ: ಖಚಿತ ಪಡಿಸಿದ ಮಾಜಿ ರಾಯಬಾರಿ

ನವದೆಹಲಿ, ಜ.9- ಕಳೆದ ವರ್ಷ ಭಾರತದ ಸೇನೆ ಪಾಕಿಸ್ತಾನದ ನೆಲೆಗೆ ನುಗ್ಗಿ ವಾಯು ದಾಳಿ ನಡೆಸಿದ ಸಂದರ್ಭದಲ್ಲಿ 300 ಭಯೋತ್ಪಾದಕರು ಎನ್ನುವ ಸಂಗತಿಯನ್ನು ಪಾಕಿಸ್ತಾನದ ಹಿರಿಯ ನಿವೃತ್ತ ರಾಜತಾಂತ್ರಿಕ ಅಧಿಕಾರಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.

2019 ರ ಫೆಬ್ರವರಿ 26 ರಂದು ಭಾರತೀಯ ಸೇನೆ ಬಾಲಕೋಟ್ ನೆಲೆಗೆ ನುಗ್ಗಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ಧ್ವಂಸ ಮಾಡಿತ್ತು

ಈ ಸಂಬಂಧ ಪಾಕಿಸ್ತಾನದ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಮಾಜಿ ರಾಯಭಾರಿ ಅಗಾ ಇಲಾಯಿ ಅವರು, ಭಾರತದ ಸೇನಾಪಡೆ ಬಾಲಾಕೋಟ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 300 ಭಯೋತ್ಪಾದಕರು ಆಗಿದ್ದರು ಎನ್ನುವ ವಿಷಯವನ್ನು ಖಚಿತಪಡಿಸಿದ್ದಾರೆ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಉಗ್ರರು ಗಡಿಭದ್ರತಾ ಪಡೆಯ 40ಕ್ಕೂ ಹೆಚ್ಚು ಯೋಧರನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದಿತ್ತು.

ವಾಯುದಾಳಿಯ ಸಂಬಂಧ ಮಾಹಿತಿ ಹಂಚಿಕೊಂಡಿರುವ ಮಾಜಿ ರಾಯಭಾರಿ ಆಗಾ ಇಲಾಯಿ ಅವರು ಭಾರತದ ಸೇನಾಪಡೆ ಅಂತರಾಷ್ಟ್ರೀಯ ಗಡಿಯನ್ನು ನುಗ್ಗಿ ಬಾಲಕರ ವಲಯದಲ್ಲಿ ಉಗ್ರರನ್ನು ಹತ್ತೆ ಮಾಡಿದ್ದು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು ಎಂದು ಹೇಳಿದ್ದಾರೆ.

ಭಾರತೀಯ ಸೇನಾಪಡೆ ಪ್ರಬಲವಾಗಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯಾವುದೇ ತಂತ್ರಗಳು ಫಲಿಸಲಿಲ್ಲ ಎನ್ನುವ ವಿಷಯವನ್ನು ಅವರು ಬಾಯಿಬಿಟ್ಟಿದ್ದಾರೆ.

ಮತ್ತೆ ದಾಳಿ ಸಾದ್ಯತೆ ‌ಇತ್ತು:

ಪಾಕಿಸ್ತಾನ ಸೇನಾಪಡೆಗಳು ವರ್ಷದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಒಂದು ವೇಳೆ ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿತ್ತು ಎನ್ನುವ ವಿಷಯವನ್ನು ಮಾಜಿ ವಿದೇಶಾಂಗ ಸಚಿವ ಶಾ ಮಹಮ್ಮದ್ ಕುರೇಶಿ ಹೇಳಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವ ಸರ್ಕಾರ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡಿ ಮುಂದಾಗುವ ಸಂಭಾವ್ಯ ದಾಳಿಯನ್ನು ತಡೆದಿದೆ ಎಂದು ಅವರು ತಿಳಿಸಿದರು