ವಾಮಾಚಾರದ ಸುತ್ತ ಗದಾಯುದ್ದ

ವಾಮಾಚಾರದ ಸುತ್ತ ಸಾಗುವ “ಗದಾಯುದ್ದ” ಕುತೂಹಲ ಕೆರಳಿದೆ. ಬೆಳಗಾವಿಯ ನಿತಿನ್ ಶಿರಗೂರ್‍ಕರ್ ಬಂಡವಾಳ ಹಾಕಿದ್ದು  ಅವರ ಪುತ್ರ ಸುಮಿತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಶ್ರೀವತ್ಸ , ಗದಾಯುದ್ದ ಚಿತ್ರಕ್ಕಾಗಿ ಸಾಕಷ್ಟು ಜನ ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿದ್ದಾರೆ. ಗಡಿಭಾಗದಲ್ಲಿನ  ಖಂಡಾಲ ಘಾಟ್ಸ್ ಬಳಿಯ ನೂರೈವತ್ತು  ಅಡಿ ಎತ್ತರದ ಬಾಬಾ ಫಾಲ್ಸ್ ಮೇಲೆ ಹೆಲಿಕ್ಯಾಮ್‍ನಲ್ಲಿ ಆಕ್ಷನ್ ಸೀಕ್ವೆನ್ಸ್  ಚಿತ್ರೀಕರಣ ಮಾಡುವಾಗ ಆಪರೇಟರ್ ಆಯತಪ್ಪಿ ಕೆಳಗೆ ಬಿದ್ದುಬಿಟ್ಟರು. ನಂತರ ಮೇಲಕ್ಕೆತ್ತಿ ಚಿಕಿತ್ಸೆ ಕೊಡಿಸಲಾಯಿತು. ಸುರಕ್ಷಿತವಾಗಿದ್ದರು. ಕ್ಲೈಮ್ಯಾಕ್ಸ್ ನ ಬೆಂಕಿ ಸೀನ್ ಸಮಯದಲ್ಲೂ ಅದೇ ರೀತಿ ಆಯಿತು ಎನ್ನುವ ಮಾಹಿತಿ ಹಂಚಿಕೊಂಡರು.

ವಿಜ್ಞಾನಿಯ ಪಾತ್ರ ಮಾಡಿದ  ಶಿವರಾಮಣ್ಣ ಬಾಂಬ್ ಬ್ಲಾಸ್ಟ್ ಸಮಯದಲ್ಲಿ ಎದುರೇ ಇದ್ದರು. ಸತ್ಯಜಿತ್ ಕೂಡ ಬಂದು ಕೆಲಸ ಮಾಡಿಕೊಟ್ಟರು. ನಾಳೆ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ.  ಉಳಿದ ಭಾಷೆಯಲ್ಲಿ ಈ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ ಎಂದರು.

ನಟ ಗಣೇಶ್ ತಮ್ಮ ಮಹೇಶ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪೈಟ್ ಮಾಸ್ಟರ್ ಅರ್ಜುನ್ ರಾಜ್ ರಿಸ್ಕಿ ಶಾಟ್ ಮಾಡಿದ್ದಾರೆ. ಹೆಸರು ಹೇಗೆ ಗದಾಯುದ್ದವೋ ಹಾಗೇ ಹಾಗೇ ಹಾಗೇ ಫೈಟರ್ಸ್ ಕೂಡ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಾಯಕ ಸುಮಿತ್ ಮಾತನಾಡಿ, ಚಿತ್ರದಲ್ಲಿ ಭೀಮ ಎನ್ನುವ ವೈದ್ಯಕೀಯ ವಿದ್ಯಾರ್ಥಿಯ ಪಾತ್ರ ಮಾಡಿದ್ದೇನೆ. ಆಕ್ಷನ್ , ಕಾಮಿಡಿ, ಥ್ರಿಲ್ಲರ್, ನಾಲೆಡ್ಜ್ , ಸೈಂಟಿಫಿಕ್ ವಿವರಣೆ ಇದೆ ಎಂದರು. ನಾಯಕಿ ಧನ್ಯ ಪಾಟೀಲ್ ಮಾತನಾಡಿ  ಮಾಟಗಾರನ ಮಗಳು ಪ್ರತ್ಯಕ್ಷ ಎಂಬ  ಪಾತ್ರದಲ್ಲಿ   ಕಾಣಿಸಿಕೊಂಡಿದ್ದೇನೆ ಎಂದರು.

ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಸ್ಪರ್ಷ ರೇಖಾ, ಶರತ್ ಲೋಹಿತಾಶ್ವ ಸೇರಿದಂತೆ ಮತ್ತಿತರು ನಟಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ  ವೈಸ್ ಕಿಂಗ್ ಕೆಲಸ ಮಾಡಿದ್ದಾರೆ.