ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ

ಕರಜಗಿ :ಮಾ.26:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಫಜಲಪುರ ತಾಲೂಕಿನ ಆನೂರ ವಲಯದ ದೇವಲ ಗಾಣಗಾಪುರ ಕಾರ್ಯ ಕ್ಷೇತ್ರದಲ್ಲಿ ವಾತ್ಸಲ್ಯ ಯೋಜನೆಯಡಿ ಶಾಂತಾಬಾಯಿ ಪೂಜಾರಿ ಅವರಿಗೆ ಮನೆ ಹಸ್ತಾಂತರಿಸಲಾಯಿತು
ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಮಾತನಾಡಿ ಮಾತೃಶ್ರೀ ಹೇಮಾವತಿ ಅಮ್ಮನವರ ಮನದಲ್ಲಿ ಮೂಡಿಬಂದ ವಾತ್ಸಲ್ಯಮಯಿ ಕಾರ್ಯಕ್ರಮವೆ ಈ ವಾತ್ಸಲ್ಯ ಮನೆ ಹಂಚಿಕೆ.ಹಲವಾರು ನಿರ್ಗತಿಕರ ಬದುಕನ್ನು ಹಸನಾಗಿಸಿರುವ, ಬದುಕು ಕಟ್ಟಿಕೊಟ್ಟ,ಕಾರ್ಯಕ್ರಮವಾಗಿದೆ.ತಾಲೂಕಿನಲ್ಲಿ 82 ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಶಾಸನ ನೀಡಲಾಗುತ್ತಿದೆ ಶಾಂತಾಬಾಯಿ ಪೂಜಾರಿ ಅವರಿಗೆ ಪ್ರತಿ ತಿಂಗಳು 1000 ರೂಪಾಯಿ ಮಾಶಾಸನ ನೀಡಲಾಗುತ್ತಿದೆ.
ಶಾಂತಾಬಾಯಿ ಅವರಿಗೆ ಉಳಿಯಲು ಸರಿಯಾದ ಮನೆ ಇಲ್ಲದಿರುವುದರಿಂದ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಎಂಬ ಮನೆ ಕಟ್ಟಿ ಹಸ್ತಾಂತರ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ಅಯ್ಯಪ್ಪ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪಾರ್ವತಿ ಮಠಪತಿ ದತ್ತಾತ್ರಯ ದೇವಸ್ಥಾನದ ಪ್ರಧಾನ ಅರ್ಚಕ ಕಲ್ಲಂಭಟ್ ಪೂಜಾರಿ ಮೋನಪ್ಪ ಬಡಿಗೇರ ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಸ್ವಸಹಾಯ ಸಂಘದ ಸದಸ್ಯರಿದ್ದರು .