ವಾಣಿಜ್ಯ ಸಿಲಿಂಡರ್ ೧೭೧ ರೂ ಇಳಿಕೆ

ನವದೆಹಲಿ,ಮೇ೧- ಹೋಟೆಲ್ ಮಾಲೀಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿದೆ. ೧೯ ಕೆ.ಜಿ. ತೂಕದ ಸಿಲಿಂಡರ್ ದರವನ್ನು ೧೭೧.೫ ರೂ ನಷ್ಷು ಇಳಿಕೆ ಮಾಡಿದೆ.ಬೆಲೆ ಏರಿಕೆಯಿಂದ ಬಸವಳಿದಿರುವ ದೇಶದ ಜನತೆಗೆ ಕೊಂಚ ನೆಮ್ಮದಿ ತಂದಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿದೆ.ಅಡುಗೆ ಅನಿಲ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ.ವಾಣಿಜ್ಯ ಅಡುಗೆ ಅನಿಲ ದರ ಇಳಿಕೆಯಿಂದಾಗಿ ರಾಜಾಧಾನಿ ದೆಹಲಿಯಲ್ಲಿ ೧೮೫೬.೫೦ ರೂಪಾಯಿ ಇದೆ.
ಬೆಲೆ ಇಳಿಕೆಯಿಂದ ಮುಂಬೈನಲ್ಲಿ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ೧,೮೦೮.೫೦ ರೂ ಆಗಿದ್ದರೆ, ಕೋಲ್ಕತ್ತಾದಲ್ಲಿ ೧,೯೬೦.೫೦ ರೂ. ಹಾಗೂ ಚೆನ್ನೈನಲ್ಲಿ ೨,೦೨೧.೫೦ ರೂ.ಗೆ ಸಿಲಿಂಡರ್ ಮಾರಾಟವಾಗಲಿದೆ.ಬೆಂಗಳೂರಿನಲ್ಲಿ ೧,೮೫೬ ರೂಪಾಯಿಯಷ್ಟಿದೆ.ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.ಕಳೆದ ತಿಂಗಳು ೯೧.೫೦ ರೂ ಇಳಿಕೆ ಮಾಡಿತ್ತು.ಪರಿಷ್ಕರಣೆಗೆ ಮೊದಲು, ಭಾರತೀಯ ತೈಲ ನಿಗಮದ ಅನುಸಾರ ದೆಹಯಲ್ಲಿ ೧೯ ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕ್ರಮವಾಗಿ ೨,೦೨೮ ರೂ., ಕೋಲ್ಕತ್ತಾದಲ್ಲಿ ೨,೧೩೨ ರೂ., ಮುಂಬೈನಲ್ಲಿ ೧,೯೮೦ ರೂ. ಮತ್ತು ಚೆನ್ನೈನಲ್ಲಿ ೨,೧೯೨.೫೦ ರೂ.ಗೆ ಮಾರಾಟವಾಗುತ್ತಿತ್ತು. ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು ಏ.೧ ರಂದು ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ ೯೧.೫೦ ರೂ. ಕಡಿತಗೊಳಿಸಿತ್ತು. ಈಗ ಮತ್ತೆ ೧೭೧.೫೦ ರೂ. ಇಳಿಕೆ ಮಾಡಲಾಗಿದೆ.