ವಾಣಿಜ್ಯ ಸಿಲಿಂಡರ್ ೧೦೦ ರೂ. ಇಳಿಕೆ

ನವದೆಹಲಿ,ಆ.೧- ಬೆಲೆ ಏರಿಕೆಯಿಂದ ಕಂಗಾಲು ಆಗಿರುವ ಜನರು ತುಸು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ವಾಣಿಜ್ಯ ಸಿಲಿಂಡರ್‌ಗೆ ಮಾತ್ರ ಅನ್ವಯವಾಗುವಂತೆ ಇಂದಿನಿಂದ ಬೆಲೆ ತುಸು ಕಡಿಮೆಯಾಗಿದೆ.ಭಾರತ್, ಇಂಡೇನ್, ಎಚ್‌ಪಿಯಂತಹ ತೈಲ ಕಂಪನಿಗಳು ೧೯ ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೧೦೦ ರೂ ಕಡಿತ ಮಾಡಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ.ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು, ಹೋಟೆಲ್ ವರ್ಗದವರಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ.
ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ೧,೬೮೦ ರೂಪಾಯಿ,ಕೋಲ್ಕತ್ತಾದಲ್ಲಿ ೧,೮೦೨ ರೂಪಾಯಿ, ಮುಂಬೈನಲ್ಲಿ ೧,೬೪೦ ರೂಪಾಯಿ ಮತ್ತು ಚೆನ್ನೈನಲ್ಲಿ ೧,೮೫೨ ರೂಪಾಯಿ, ಬೆಂಗಳೂರಿನಲ್ಲಿ ೧೪.೨ ಕೆಜಿ ಸಿಲಿಂಡರ್ ಬೆಲೆ ೧,೧೦೫ ರೂಪಾಯಿ ಇದೆ. ೫ ಕೆಜಿ ಸಿಲಿಂಡರ್ ಬೆಲೆ ೪೦೬ ರೂಪಾಯಿ ನಷ್ಟು ಇದೆ.
ಬೆಂಗಳೂರಿನಲ್ಲಿ ೧೯ ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ೧,೭೬೭ ರೂಪಾಯಿ ಆಗಿದೆ. ರಾಜಧಾನಿಯಲ್ಲಿ ೯೨.೫೦ ರೂ.ವರೆಗೆ ಬೆಲೆ ಇಳಿದಿದೆ.
ಗೃಹ ಬಳಕೆಯ ೧೪.೨ ಕೆಜಿ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಕೊನೆಯ ಬಾರಿ ಮಾರ್ಚ್‌ನಲ್ಲಿ ಸಿಲಿಂಡರ್ ಬೆಲೆ ಬದಲಾಗಿತ್ತು. ಸದ್ಯ ೧೪.೨ ಕೆಜಿ ಸಿಲಿಂಡರ್ ಬೆಲೆ ೧,೧೦೩ ರೂಪಾಯಿ ಇದೆ.ಈ ತಿಂಗಳು ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಿತ್ತು. ಆದರೆ ತೈಲ ಕಂಪನಿಗಳು ಕೇವಲ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿವೆ.

ಎಲ್ಲೆಲ್ಲಿ ಎಷ್ಟೆಷ್ಟು
ದೆಹಲಿ- ೧,೬೮೦ ರೂ
ಕೋಲ್ಕತ್ತಾ- ೧,೮೦೨ ರೂ
ಮುಂಬೈ- ೧,೬೪೦ ರೂ
ಚೆನ್ನೈ- ೧,೮೫೨ ರೂ
ಬೆಂಗಳೂರು- ೧,೭೬೭ ರೂ