ವಾಣಿಜ್ಯ ಸಿಲಿಂಡರ್ ದರ ೧೪ ರೂ.ಹೆಚ್ಚಳ

ನವದೆಹಲಿ,ಫೆ.೧:ಕೇಂದ್ರಸರ್ಕಾರ ಬಜೆಟ್ ಮಂಡನೆಗೂ ಮುನ್ನವೆ ಸರ್ಕಾರಿಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ೧೪ ರೂ.ನಷ್ಟು ಏರಿಕೆ ಮಾಡಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಪ್ರತಿ ತಿಂಗಳು ಆರಂಭದಲ್ಲೇ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಲಿದ್ದು, ಫೆ.೧ ರಂದೇ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದೆ. ಕಳೆದ ತಿಂಗಳು ಕೂಡ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಕೊಂಚ ಏರಿಕೆ ಮಾಡಿತ್ತು. ಈಗ ತಿಂಗಳಾರಂಭದಲ್ಲೇ ೧೪ ರೂ. ಹೆಚ್ಚಳ ಮಾಡಿರುವುದರಿಂದ ಹೋಟೆಲ್‌ಗಳಲ್ಲಿ ತಿಂಡಿ ತಿನಿಸಿನ ದರವೂ ತುಟ್ಟಿಯಾಗಲಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ದರವನ್ನು ೧೨ ಬಾರಿ ಪರಿಷ್ಕರಿಸಲಾಗಿದೆ. ಆದರೆ,ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತಿದೆ.

ವಿವಿಧ ನಗರಗಳಲ್ಲಿ ದರ
ದೆಹಲಿ-೧,೭೬೯.೫೦
ಕೊಲ್ಕತ್ತ-೧,೮೮೭
ಮುಂಬೈ-೭೨೩.೫೦
ಚೆನ್ನೈ-೧,೯೩೭