ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗಾವಕಾಶ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಫೆ 6: ವಾಣಿಜ್ಯ ಶಾಸ್ತ್ರವನ್ನು  ಓದುವ ವಿದ್ಯಾರ್ಥಿಗಳಿಗೆ  ಈಗ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗದ ಅವಕಾಶಗಳಿವೆ‌ ಕೌಶಲ್ಯ, ತಂತ್ರಗಾರಿಕೆ , ಸ್ಪರ್ಧಾತ್ಮಕವಾದ ಮನೋಭಾವನೆಯನ್ನು ವಿಧ್ಯಾರ್ಥಿಗಳು‌ ಬೆಳೆಸಿಕೊಳ್ಳಬೇಕೆಂದು  ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ರಮೇಶ್ ಓಲೆಕಾರ್ ಹೇಳಿದ್ದಾರೆ.
ನಗರದ ಸರಳಾದೇವಿ ಕಾಲೇಜಿನ  ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗಗಳ ಹಾಗೂ  ‘ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್  ಆಫ್ ಇಂಡಿಯಾ ‘ ದಿಂದ  ಬಿ ಡಿ ಎ ಎ ಸಭಾಂಗಣದಲ್ಲಿ ವಾಣಿಜ್ಯ ಶಾಸ್ತದ ಅಧ್ಯಾಪಕರಿಗಾಗಿ ಆಯೋಜಿಸಿದ್ದ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಷಯವು ಸುಲಭವಾಗಿ ಅರ್ಥವಾಗುವ ಹಾಗೆ ಅಧ್ಯಾಪಕರು ವಿವಿಧ ಕೌಶಲ್ಯಗಳನ್ನು ರೂಡಿಸಿಕೊಂಡು ಪಾಠ ಮಾಡಬೇಕು  ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಂಶುಪಾಲ ಡಾ.ಆರ್.ಮರೇಗೌಡ ಅಧ್ಯಾಪಕರು ಮುಖ್ಯವಾಗಿ ಸೃಜನಾತ್ಮಕತೆಯನ್ನು  ಮೈಗೂಡಿಸಿಕೊಂಡು ,ಹೊಸ ಆವಿಷ್ಕಾರ         ನಾವಿನ್ಯತೆಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಬಿ.ದೇವರಾಜುಲು , ಆರ್.ಸುರೇಶ ಗುಂಜಳ್ಳಿ , ಶ್ರೀನಿವಾಸ ಪ್ರಸಾದ್ ,ಗಿರೀಶ್ ಕಂಬದರಾಯ ,    ಎಂ .ಪೂರ್ಣಿಮಾ  ಹಾಜರಿದ್ದರು .   ಕಾಲೇಜಿನ ಪ್ರಾಂಶುಪಾಲ ಎಚ್ .ಕೆ .ಮಂಜುನಾಥ್ ರೆಡ್ಡಿ  ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಹ್ಲಾದ ಚೌದ್ರಿ , ನಿರ್ವಹಣಾ ಶಾಸ್ತ್ರ ವಿಭಾಗದ ಡಾ.ಪಲ್ಲವಿ , ಪ್ರಾಧ್ಯಾಪಕರಾದ ಡಾ.ಕನ್ಯಾಕುಮಾರಿ ಉಡಗಿ, ಕಲ್ಯಾಣ ಬಸವ ,ಗುರುಬಸಪ್ಪ ,ಬಿ.ಕೆ.ಜಯಶ್ರೀ ,ಸಲಿಹಾ , ದಸ್ತಗೀರಸಾಬ್ ದಿನ್ನಿ ಉಪಸ್ಥಿತರಿದ್ದರು.