ವಾಣಿಜ್ಯ ಮಳಿಗೆಗಳ ಹಂಚಿಕೆ ಕುರಿತು ಫೆಬ್ರವರಿ 24 ರಂದು ಸಭೆ

ಕೊಲ್ಹಾರ:ಫೆ.23: ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯ ಅಡಿ ಪ್ರಾಥಮಿಕ ಶಾಲಾ ಆವರಣಕ್ಕೆ ಹೊಂದಿಕೊಂಡಂತೆ ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಹತ್ತಿರ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆಗಳ ಹಂಚಿಕೆ ಮಾಡುವ ಕುರಿತು ಫೆಬ್ರವರಿ 24 ರಂದು ಮುಂಜಾನೆ 11 ಗಂಟೆಗೆ ತಾಲೂಕ ಪಂಚಾಯತ ಕಾರ್ಯಾಲಯದ ಹತ್ತಿರದ ಸಭಾ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಪ ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ವಾಣಿಜ್ಯ ಮಳಿಗೆಗಳ ದರ ನಿಗದಿಪಡಿಸಿ ಮಂಜೂರಾತಿ ನೀಡಿರುವ ಪ್ರಯುಕ್ತ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯಿಂದ ನಿರ್ಮಾಣಗೊಂಡಿರುವ 100 ವಾಣಿಜ್ಯ ಮಳಿಗೆಗಳಲ್ಲಿ 62 ಮಳಿಗೆಗಳು ಮೂಲ ಸಂತ್ರಸ್ತರಿಗೆ ಅನುಮೋದನೆಗೊಂಡ ಪ್ರಯುಕ್ತ ವಾಣಿಜ್ಯ ಮಳಿಗೆಗಳ ಹಂಚಿಕೆ ಮಾಡುವ ಕುರಿತು ಪ ಪಂ ಆಡಳಿತಾಧಿಕಾರಿಗಳಾದ ಎಸ್.ಎಸ್ ನಾಯಕಲಮಠ ಇವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.