ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎನ್ ಎಂ ಸುರೇಶ್ ಆಯ್ಕೆ

ಬೆಂಗಳೂರು,ಸೆ.23- ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಎನ್ ಎಂ ಸುರೇಶ್ ಆಯ್ಕೆಯಾಗಿದ್ದಾರೆ.

ವಿತರಕರ ವಲಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ ಇಂದು ನಡೆದ  ನಡೆದ ಚುನಾವಣೆಯಲ್ಲಿ 1599 ಮಂದಿ ಅರ್ಹ ಮತದಾರರ ಪೈಕಿವ   957 ಮಂದಿ ಮತದಾನ ಮಾಡಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್ ಎಂ ಸುರೇಶ್ ಅವರು ತಮ್ಮ ಪ್ರತಿಸ್ಪರ್ಧಿ ಶಿಲ್ಪಾ ಶ್ರೀನಿವಾಸ್ ಅವರನ್ನು  120 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಶಿಲ್ಪಾ ಶ್ರೀನಿವಾಸ್  217,  ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತ , ಎನ್.ಎಮ್ ಸುರೇಶ್ 337 ಮತ  ಹಾಗು ಎ.ಗಣೇಶ್ 204 ಮತ ಪಡೆದಿದ್ದಾರೆ.

ಅಂತಿಮವಾಗಿ ಎನ್ ಎಂ ಸುರೇಶ್ 120 ಅಂತರದ ಗೆಲುವು ಸಾಧಿಸಿ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ‌ನಾಲ್ಕು ಅಭ್ಯರ್ಥಿಗಳು ಯಾವುದೇ ಚುನಾವಣೆಗೆ ಕಡಿಮೆ ಇಲದಂತೆ ಪ್ರಚಾರ ಮಾಡುಚ ಮೂಲಕ ಖರ್ಚು ಮಾಡಿದ್ದರು. ಹೀಗಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷರ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.

ಯಾರೆಲ್ಲಾ ಆಯ್ಕೆ:

ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕರ ವಲಯದಿಂದ ಬಾ.ನ ಗೀರೀಶ್, ಗೌರವ ಕಾರ್ಯದರ್ಶಿ ವಿತರಕರ ವಲಯ ಸುಬ್ರಮಣಿ ವಿ (ಕರಿಸುಬ್ಬು) ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕರ ವಲಯದಿಂದ
ಸುಂದರ್ ರಾಜು ಆರ್, ಉಪಾಧ್ಯಕ್ಷ ನಿರ್ಮಾಪಕರ ವಲಯದಿಂದ ಪ್ರಮೀಳಾ ಜೋಶಾಯ್ ,ಉಪಾಧ್ಯಕ್ಷ ವಿತರಕರ ವಲಯದಿಂದ ಜಿ ವೆಂಕಟೇಶ್ ,ಉಪಾಧ್ಯಕ್ಷ ಪ್ರದರ್ಶಕರ ವಲಯದಿಂದ ನರಸಿಂಹಲು ಗೆಲುವು,
ಖಜಾಂಚಿ ಯಾಗಿ ಜಯಸಿಂಹ ಮುಸರಿ ಗೆಲುವು ಸಾಧಿಸಿದ್ದಾರೆ.