ವಾಣಿಜ್ಯ ಬಳಕೆ ಸಿಲಿಂಡರ್ ೯೨ ರೂ. ಇಳಿಕೆ

ನವದೆಹಲಿ, ಏ.೧- ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ ೧ ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಸುಮಾರು ೯೨ ರೂಪಾಯಿ ಕಡಿಮೆ ಮಾಡಲಾಗಿದೆ. ವಾಣಿಜ್ಯ ಬಳಕೆದಾರರಿಗೆ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿದೆ.
೨೦೨೪ ರ ಆರ್ಥಿಕ ವರ್ಷದ ಮೊದಲ ದಿನದಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಸುಮಾರು ೯೨ ರೂ. ಇಳಿಸಿದೆ. ಆದರೆ, ಕಳೆದ ತಿಂಗಳು ಏರಿಕೆಯಾಗಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲವಣೆಯಾಗಿಲ್ಲ.ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ ೧ರಂದು ತೈಲ ಕಂಪನಿಗಳು ದರಪರಿಷ್ಕರಿಸಲಿದೆ.ಕಳೆದ ತಿಂಗಳು ಕೇಂದ್ರವು ೧೪.೨ ಕೆಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ೫೦ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ೩೫೦ ಹೆಚ್ಚಿಸಿತ್ತು. ೨೦೨೨ರಲ್ಲಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ೨೫ ಹೆಚ್ಚಿಸಲಾಯಿತು. ದೆಹಲಿಯಲ್ಲಿ ೧,೭೬೮ ಬೆಲೆ ಇತ್ತು.ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೋಲಿಸಿದರೆ, ವಾಣಿಜ್ಯ ಅನಿಲದ ದರಗಳು ಹೆಚ್ಚು ಏರಿಳಿತಗೊಳ್ಳುತ್ತವೆ. ಕಳೆದ ವರ್ಷ ಇದೇ ವೇಳೆಗೆ ದೆಹಲಿಯಲ್ಲಿ ೧೯ ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ೨,೨೫೩ರಲ್ಲಿತ್ತು. ಒಂದು ವರ್ಷದಲ್ಲಿ, ರಾಷ್ಟ್ರ ರಾಜಧಾನಿಯೊಂದರಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ೨೨೫ ಇಳಿಕೆಯಾಗಿದೆ.ಮಾರ್ಚ್‌ನಲ್ಲಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯೋಜನೆಯ ೯.೫೯ ಕೋಟಿ ಫಲಾನುಭವಿಗಳು ವಾರ್ಷಿಕವಾಗಿ ಪ್ರತಿ ೧೪.೨ ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ೨೦೦ ಸಬ್ಸಿಡಿ ಪಡೆಯುತ್ತಾರೆ ಎಂದು ಹೇಳಿದ್ದರು. ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುತ್ತಿರುವವರು ಹೆಚ್ಚುವರಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬಹುದು.
ತೈಲ ಬೆಲೆ ಸತತ ಐದನೇ ತಿಂಗಳಿಗೆ ಕುಸಿದಿದೆ. ೨೦೨೦ರ ಆರಂಭದಿಂದ ಎರಡನೇ ತ್ರೈಮಾಸಿಕ ಕುಸಿತದಲ್ಲಿ ದರ ಉತ್ತುಂಗಕ್ಕೇರಿ ನಂತರ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಸಿದಿದೆ.

೧೯ ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ

  • ನವದೆಹಲಿ-೨೦೨೮
  • ಕೋಲ್ಕತ್ತಾ -೨೧೩೨
  • ಮುಂಬೈ -೧೯೮೦
    *ಚೆನ್ನೈ -೨೧೯೨.೫೦