ವಾಣಿಜ್ಯ ,ಕಂಪ್ಯೂಟರ್ ತರಬೇತಿ : ಶೇ.100 ಫಲಿತಾಂಶ

ಕೋಲಾರ,ಏ.೭: ೨೦೨೩ನೇ ಸಾಲಿನ ಜನವರಿ ಮಾಹೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸಿದ ಬೆರಳಚ್ಚು ಪರೀಕ್ಷೆಯಲ್ಲಿ ನಗರದ ಗಲ್‌ಪೇಟೆ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆಯು ಶೇ. ೧೦೦ ರಷ್ಟು ಫಳಿತಾಂಶ ಪಡೆದಿದೆ.
ಕನ್ನಡ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಕೆ.ಕುಸುಮ ೨೦೦ಕ್ಕೆ ೧೮೫ ಅಂಕ ಹಾಗೂ ಆಂಗ್ಲ ಪ್ರಥಮ ದರ್ಜೆಯಲ್ಲಿ ಶ್ವೇತ ಕೆ ೨೦೦ಕ್ಕೆ ೧೭೩ ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.
ಉತ್ತಮ ಫಲಿತಾಂಶಕ್ಕಾಗಿ ಶ್ರಮಸಿದ ಪ್ರಾಂಶುಪಾಲ ಡಿ.ಎಂ.ನಾಗಾರಾಜ, ಬೋಧಕರಾದ ಎನ್.ಮಂಜುನಾಥ, ಹಾಗೂ ವಿದ್ಯಾರ್ಥಿಗಳನ್ನು ಪೊಲೀಸ್ ಅಧೀಕ್ಷಕರಾದ ಎಂ.ನಾರಾಯಣ, ಅಪರ ಅಧೀಕ್ಷಕರಾದ ವಿ.ಬಿ.ಭಾಸ್ಕರ್, ಡಿ.ಎ.ಆರ್ ಉಪಾಧೀಕ್ಷಕ ಮಹೇಶ್ ಜಿ ಅವರು ಅಭಿನಂದಿಸಿದ್ದಾರೆ.