ವಾಣಿಜ್ಯ ಎಲ್‌ಪಿಜಿ ೬೯.೫೦ ಇಳಿಕೆ

ನವದೆಹಲಿ,ಜೂ.೧:ವಾಣಿಜ್ಯ ಬಳಕೆಯ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತೀಯ ತೈಲ ಕಂಪನಿಗಳು ೬೯.೫೦ ಪೈಸೆಯಷ್ಟು ಕಡಿಮೆ ಮಾಡಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.
ಪ್ರತಿ ತಿಂಗಳ ಆರಂಭದಲ್ಲೇ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ದರ ಪರಿಷ್ಕರಿಸುತ್ತವೆ. ತಿಂಗಳ ಆರಂಭದಲ್ಲೇ ಕಡಿಮೆ ಮಾಡುವ ಮೂಲಕ ವಾಣಿಜ್ಯ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ ದರ ಇಳಿಕೆಯಾಗುವ ನಿರೀಕ್ಷೆ ಇದೆ. ವಾಣಿಜ್ಯ ಎಲ್‌ಪಿಜಿ ದರಗಳ ಕಡಿತವು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ತಿಂಗಳು ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ೧೯ ರೂ.ಗಳಿಗೆ ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲೂ ೧೯ ಕೆಜಿ ಸಿಲಿಂಡರ್ ದರವನ್ನು ೩೦.೫೦ ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಆದರೆ ಅಡುಗೆ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಗೃಹ ಬಳಕೆಯ ಸಿಲಿಂಡರ್ ದರ ೮೦೫.೫೦ ಪೈಸೆಯಷ್ಟಿದೆ.

ವಿವಿಧ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ದರ

  • ಬೆಂಗಳೂರು -೧.೭೫೬ ರೂ.
  • ಕೊಲ್ಕತ್ತ – ೧,೭೮೭
  • ಮುಂಬೈ-೧,೬೨೯
  • ಚೆನ್ನೈ-೧,೮೪೦
  • ನವದೆಹಲಿ-೧,೬೭೬