ವಾಣಿಜ್ಯೋದ್ಯಮ ಸಂಸ್ಥೆಯಿಂದ ಆಹಾರ ವಿತರಣೆ

ಬಳ್ಳಾರಿ, ಮೇ.29: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಇಂದು ನಗರದ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ (ಒಪಿಡಿ)ಯ ರೋಗಿಗಳ ಸಂಬಂಧಿಗಳಿಗೆ, ಸಹಾಯಕರಿಗೆ 400 ಆಹಾರದ ಪೂಟ್ಟಣ, ಬಾಳೆಹಣ್ಣು ಮತ್ತು ಕುಡಿಯುವ ನೀರಿನ ಪ್ಯಾಕೆಟ್ ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶ್ವಂತ್ ರಾಜ್ ನಾಗಿರೆಡ್ಡಿ , ಎ.ಮಂಜುನಾಥ, ಉಪಾಧ್ಯಕ್ಷ ಟಿ ಶ್ರೀನಿವಾಸ್ ರಾವ್ , ಚೇರ್ಮನ್, ಸಿಎಸ್ಆರ್ ಕಮಿಟಿ, ವಿ ರಾಮಚಂದ್ರ, ಚೇರ್ಮನ್, ಎಪಿಎಂಸಿ ಕಮಿಟಿ, ಟಿ ಶ್ರೀನಿವಾಸ್ ರಾವ್ , ಅಧ್ಯಕ್ಷರು ಮಾಧ್ಯಮ ಮತ್ತು ಪತ್ರಿಕೆ , ಕಾರ್ಯಕಾರಿ ಸಮಿತಿ ಸದಸ್ಯರು ಮರ್ಚೇಡ್ ಮಲ್ಲಿಕಾರ್ಜುನ ಗೌಡ, ಶೇಶಿರೆಡ್ಡಿ ,ವಿಶೇಷ ಆಹ್ವಾನಿತರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗ ಆಹಾರವನ್ನು ವಿತರಿಸಿದರು.