ವಾಡಿ-80 ಬೈಕ್ ಜಪ್ತಿ

ವಾಡಿ,ಮೇ.27-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಸಂಪೂರ್ಣ ಲಾಕ್ ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದ 80 ಬೈಕ್, 4 ಟಂಟಂ ಮತ್ತು 4 ಕಾರುಗಳನ್ನು ಇಂದು ವಾಡಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಪಿಎಸ್ಐ ವಿಜಯಕುಮಾರ ಭಾವಗಿ ಅವರ ನೇತೃತ್ವದಲ್ಲಿ ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ, ಸಿಬ್ಬಂದಿಗಳಾದ ದತ್ತು ಜಾನೆ ಮತ್ತಿತರರು ಸೇರಿ ಲಾಕ್ ಡೌನ್ ಆದೇಶ ಉಲ್ಲಂಘಿ ರಸ್ತೆಗಿಳಿದ ವಾಹನಗಳನ್ನು ಜಪ್ತಿ ಮಾಡಿದರು.
ಬೆಳಿಗ್ಗೆ 6 ಗಂಟೆಯಿಂದಲೇ ರಸ್ತೆಗಿಳಿದ ಪೊಲೀಸರು ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಜಪ್ತಿ ಮಾಡುವುದರ ಮೂಲಕ ಲಾಕ್ ಡೌನ್ ಬಿಸಿ ಮುಟ್ಟಿಸಿದರು.