ವಾಡಿ : 415.28 ಕೋಟಿ ಕಾಮಗಾರಿಗೆ ಸಚಿವ ಪ್ರಿಯಾಂಕ್ ಚಾಲನೆ

ಕಲಬುರಗಿ,ಮಾ.11: ವಾಡಿ ಪಟ್ಟಣದಲ್ಲಿ ಇಂದು ಜರುಗಿದ ಸಂವಿಧಾನ ಜಾಗೃತಿ ಸಮಾರಂಭದಲ್ಲಿ 415.28 ಕೋಟಿ ರೂ. ಬೃಹತ್ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನೀಡಿದರು.
ರಿಮೋಟ್ ಒತ್ತುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಜಿಟಲ್ ಮೋಡನಲ್ಲಿ 120 ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಲ್ಲಿ 105 ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರೆ 15 ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ 3,125 ಲಕ್ಷ ರೂ., ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ 1,533.77 ಲಕ್ಷ ರೂ., ಪಿ.ಎಂ.ಜಿ.ಎಸ್.ವೈ 2,894.05 ಲಕ್ಷ ರೂ., ಲೋಕೋಪಯೋಗಿ ಇಲಾಖೆಯ 1,185 ಲಕ್ಷ ರೂ., ಕರ್ನಾಟಕ ಗೃಹ ಮಂಡಳಿಯ 200 ಲಕ್ಷ ರೂ., ಚಿತ್ತಾಪೂರ ಪುರಸಭೆಯ 221 ಲಕ್ಷ ರೂ., ವಾಡಿ ಪುರಸಭೆಯ 352 ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 22,749.71 ಲಕ್ಷ ರೂ., ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 2,705 ಲಕ್ಷ ರೂ., ಕಾಡಾ ನೀರಾವರಿ ಯೋಜನೆಯ 90.32 ಲಕ್ಷ ರೂ., ಕೆ.ಬಿ.ಜೆ.ಎನ್.ಎಲ್ ನಿಗಮದ 71.25 ಲಕ್ಷ ರೂ., ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ 1,786.08, ಕಲ್ಯಾಣ ಪಥ ಯೋಜನೆಯಡಿ ರಸ್ತೆ ಕಾಮಗಾರಿಯ 3,400 ಲಕ್ಷ ರೂ., ಪಂಚಾಯತ್ ಕಟ್ಟಡ ನಿರ್ಮಾಣದ 550 ಲಕ್ಷ ರೂ., ಪಿ.ಎಂ.ಜಿ.ಎಸ್.ವೈ ಲೆಕ್ಕ ಶೀರ್ಷಿಕೆ-5054 ಯೋಜನೆಯ 665 ಲಕ್ಷ ರೂ. ಕಾಮಗಾರಿಗಳು ಸೇರಿವೆ.ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ, ಯುವ ನಿಧಿ, ಅನ್ನ ಭಾಗ್ಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.