ವಾಡಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸಿ

ವಾಡಿ:ಜೂ.6: ಪಟ್ಟಣ ಸೇರಿದಂತೆ ಸಮೀಪದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಆಗುತ್ತಿದ್ದು, ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಬೆಸಿಗೆ ಕಾಲ ಕಳೆದು ಮಳೆಗಾಲ ಇನ್ನೂ ಪ್ರಾರಂಭವೇ ಆಗಿಲ್ಲ. ಆದರೆ, ಸಮಸ್ಯೆ ಮಾತ್ರ ಬೃಹತ ಮಟ್ಟದಲ್ಲಿ ಆಗುತ್ತಿದೆ. ಕರೆಂಟ್ ಇಲ್ಲದೇ ಮನೆಯಲ್ಲಿ ನೀರಿಲ್ಲ. ಯಾವುದೇ ಕೆಲಸ ಕಾರ್ಯಗಳು ನಿರ್ವಹಿಸಲು ಆಗುತ್ತಿಲ್ಲ.

ಅಧಿಕಾರಿಗಳು ಮಾತ್ರ ಬೇಜವ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಜನರು ಜೆಸ್ಕಾಂ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತಿಚಿಗೆ ಕರೆಂಟ್ ಸಮಸ್ಯೆಯಿಂದ ಬೆಸೆತ್ತವರು ಕೂಂದನೂರ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿರುವ ಘಟನೆ ಜರುಗಿತ್ತು.

ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರ ಗ್ರಾಮದ ಪಂಪಾಪತಿಗೌಡ ಅವರ ಜಮೀನಿನಲ್ಲಿ ವಿದ್ಯುತ್ ತಂತಿ ಹರಿದು ಬಿದ್ದು ಸುಮಾರು ಆರು ತಿಂಗಳು ಕಳೆದು ಹೊಗಿದ್ದು, ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೇ ಉಳಿದಿವೆ ಗೋಳು ಯಾರೂ ಕೇಳೋರಿಲ್ಲದಂತಾಗಿದೆ ಎಂದು ಗ್ರಾಪಂ ಸದಸ್ಯ ಅಯ್ಯಪ್ಪ ದೊಡ್ಡಮನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಲ್ಪ ಗಾಳಿಮಳೆ ಬಂದರೆ ಸಾಕು ಇಡೀ ಗ್ರಾಮದ ಲೈನ್‍ಗಳು ಸ್ಪರ್ಶ ಉಂಟಾಗಿ ಪದೇ ಪದೇ ವಿದ್ಯುತ್ ಕೈಕೊಡುತ್ತಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಬಾಗಿ ನಿಂತಿವೆ ವಿದ್ಯುತ್ ತಂತಿಗಳು ನೆಲಕ್ಕೆ ತಾಗಿ ನಿಂತಿದ್ದು, ಗಾಳಿಗೆ ಉರಳಿ ಬಿಳುವ ಮಟ್ಟಕ್ಕೆ ತಲುಪಿವೆ. ಇಂಗಳಗಿ, ಕುಂದನೂರ, ಚಾಮನೂರ, ಲಾಡ್ಲಾಪೂರ, ಕಮರವಾಡಿ ಸ್ಭೆರಿದಂತೆ ವಿವಿಧ ಗ್ರಾಮಗಳಲ್ಲಿ ಬಾಗಿ ನಿಂತಿರುವ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ತಂತಿಗಳ ದುರಸ್ಥಿ ಕಾರ್ಯಕ್ಕೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಪ್ರತಿ ತಿಂಗಳು ಬಿಲ್ ಪಡೆಯಲು ಬರುವ ಮೀಟರ್ ಲೀಡರ್‍ಗಳು ಹಾಗೂ ಜೆಸ್ಕಾಂ ಇಲಾಖೆ ಸಿಬ್ಬಂದಿಗಳಿಗೆ ಈ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು ಯಾವುದೇ ಪ್ರಯೋಜನೆವಾಗಿಲ್ಲ.
ಚುನಾಯಿತ ಸದಸ್ಯರಾಗಿರುವ ನಾವು ಜನರ ಪ್ರಶ್ನೆಗೆ ಹೇಗೆ ಉತ್ತರ ನೀಡಬೇಕು ಹೇಳಿ?. ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ತಲೆ ತಗ್ಗಿಸುವಂತಾಗಿದೆ ಎಂದು ದೂರಿದ್ದಾರೆ.
ಅಯ್ಯಪ್ಪ ದೊಡ್ಡಮನಿ. ಗ್ರಾ.ಪಂ ಸದಸ್ಯ ಕಮರವಾಡಿ.


ವಾಡಿ ಪಟ್ಟಣದಲ್ಲಿ ವಾರದಲ್ಲಿ 2ದಿನ ಮಾತ್ರ ನೀರು ಬೀಡಲಾಗುತ್ತಿದೆ. ಅದರಲ್ಲಿಯೇ ದಿನದಲ್ಲಿ 15 ಬಾರಿ ಕರೆಂಟ್ ತೆಗೆಯಲಾಗುತ್ತಿದೆ. ಇದರಿಂದ ಪಾಳಿ ಕಾಯುವಿಕೆ ನಿರಂತರವಾಗಿದೆ. ನೀರಿನ ಸಮಸ್ಯೆ ಆದಾಗೊಮ್ಮೆ ಮೋಟರ್ ಕೆಟ್ಟಿರುವ ನೆಪ ಎದುರಾಗುತ್ತದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳು ತೀರಾ ಬಗೆಹರಿಯದ ಸಮಸ್ಯೆ ಇದ್ದರೇ ಮೇಲಾಧಿಗಳ ಗಮನಕ್ಕೆ ತರಬೇಕು. ಜನರ ಜೀವನದ ಜೊತೆ ಚೆಲ್ಲಾಟ ಆಡಬಾರದು.