ವಾಡಿ: ಕತ್ತಲಲ್ಲಿ ನಿತ್ಯ ಜನರ ಸಂಚಾರ

ಮಲಿಕಪಾಶಾ ಮೌಜನ

ವಾಡಿ:ನ.9: ವಾಡಿ ಪೋಲಿಸ್ ಠಾಣೆಯ ಎದುರಿನ ರಸ್ತೆಯಿಂದ ಎಸಿಸಿ ಕಂಪನಿಯವರೆಗೆ ಸಾಗುವ ರಸ್ತೆಯು ಕತ್ತಲಮಯವಾಗಿದ್ದು, ಜನರು ಅಂಜಿಕೆಯಲ್ಲಿ ಸಾಗುವ ಪರಿಸ್ಥಿತಿ ಎದುರಾಗಿದೆ.

ಚಿತ್ತಾಪೂರ ತಾಲ್ಲೂಕಿನ ವಾಡಿ ಪಟ್ಟಣದ ಈ ರಸ್ತೆಯಲ್ಲಿ ವಿದ್ಯುತ ಕಂಬವಿದೆ. ಆದರೆ, ಬಲ್ಬಗಳಿಲ್ಲ. ಅಕ್ಕ-ಪಕ್ಕ ಮನೆಯ ಕೆಲ ಮಹಿಳೆಯರು ಬಯಲು ಶೌಚಾಲಯವನ್ನು ಅವಲಂಬಿಸಿದ್ದು, ನಿತ್ಯ ನರಕಯಾತನೆಯ ಅನುಭವ ಆಗುತ್ತಿದೆ. ಅಲ್ಲದೆ ವಾಹನಗಳ ಹೆಡ್‍ಲೈಟ್ ಜನರ ಮುಖಕ್ಕೆ ಬೀದ್ದರೇ ನಿಮಿಷದವರೆಗೆ ರಸ್ತೆ ಕಾಣದ ಸಮಸ್ಯೆ. ಮೈಮೇಲೆ ವಾಹನ ಬರುವ ಭಯ ಮತ್ತೋಂದಡೆ.

ಇದನ್ನೆಲ್ಲಾ ಕಂಡು ಕಾಣದಂತೆ ಜಾಣಕುರುಡು ವಹಿಸಿರುವ ಜನಪ್ರತಿನಿಧಿಗಳು, ಅಧಿಕಾರಿಗಳು. ಎಸಿಸಿ ಕಂಪನಿ ಹೆಸರು ಮಾಡಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ತನ್ನ ಸುತ್ತ-ಮುತ್ತಲಿನ ಪರಿಸಿರ ಹಾಗೂ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯದಿಂದ ವಂಚಿತ ಮಾಡಿದೆ ಎನ್ನುವ ಆರೋಪ ಇಲ್ಲಿನ ಜನರಿಗಿದೆ. ಕಂಪನಿಯಿಂದ ಕೋಟಿ ರೂಪಾಯಿ ತೆರಿಗೆ ಪಡೆಯುತ್ತಿರುವ ಪುರಸಭೆ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.


ವಿದ್ಯುತ ದೀಪದ ಸಮಸ್ಯೆ ಕುರಿತು ಹಲವಾರು ದಿನಗಳಿಂದ ಎಸಿಸಿ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೆವೆ. ಆದರೆ, ಯಾರು ಕೂಡಾ ಜನರ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ. ನಿತ್ಯ ನೂರಾರು ಕಾರ್ಮಿಕರು ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಕತ್ತಲಲ್ಲೇ ಮನೆಗೆ ತೆರಳುತ್ತಾರೆ. ಒಂದು ವೇಳೆ ಅನಾಹುತವಾದರೆ ಜವಾಬ್ದಾರರು ಯಾರು.

ಸಿದ್ದು ಪೂಜಾರಿ. ಅಧ್ಯಕ್ಷರು ಕರವೇ (ಪ್ರವೀಣಶೆಟ್ಟಿ ಬಣ) ವಾಡಿ ವಲಯ.


ಸ್ಟ್ರೀಟ್ ಲೈಟ ಇಲ್ಲದಿರುವುದರಿಂದ ತೊಂದರೆಯಲ್ಲಿ ಜನಸಾಗಾಟ ನಡೆದಿದೆ. ಮಳೆ ಬಂದರೆ ರಸ್ತೆ ಸಂಪೂರ್ಣ ಜಲಾವೃತವಾಗುತ್ತದೆ. ವಿದ್ಯುತ ದೀಪ ಇಲ್ಲದರಿಂದ ನೀರಿನಲ್ಲಿ ಬೀಳುತ್ತಿರುವ ಘಟನೆಗಳು ಜರಗುತ್ತಿವೆ. ಎಸಿಸಿಯ ವಾಹನಗಳು ರಸ್ತೆಗೆ ಕಸ ಚೆಲ್ಲುತ್ತಿವೆ. ಪರಿಸರ ಸ್ವಚ್ಛತೆಗೆ ಎಸಿಸಿ ಮೊದಲ ಆದ್ಯತೆ ನೀಡಬೇಕು. ತಕ್ಷಣವೇ ವಿದ್ಯುತ ದೀಪಗಳನ್ನು ಅಳವಡಿಸಲು ಕಂಪನಿ ಮುಂದಾಗಬೇಕು.

ಶರಣು ಹೇರೂರ. ತಾಲ್ಲೂಕ ಅಧ್ಯಕ್ಷರು, ಎಐಯುಟಿಯುಸಿ ಕಾರ್ಮಿಕ ಸಂಘಟನೆ.