
ವಾಡಿ:ಮೇ.6: ಕೇವಲ ಬುದ್ದನ ಮೂರ್ತಿ ಸ್ಥಾಪನೆಯಿಂದ ಜೀವನ ಸಾರ್ಥಕ ಆಗುವುದಿಲ್ಲ. ಗೌಥಮ ಬುದ್ದರ ಆಚಾರ-ವಿಚಾರಗಳು ನಮ್ಮಿನಿಮ್ಮಲ್ಲರ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಬುದ್ದನ ಮಾರ್ಗದಲ್ಲಿ ಸಾಗಿ ಜೀವನದ ಪಯಣ ಯಶಸ್ವಿಗೊಳಿಸಲು ಸಾಧ್ಯ ಎಂದು ಜೆಎನ್‍ಯು ವಿಧ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯಾಕುಮಾರ ಹೇಳಿದರು.
ಪಟ್ಟಣದ ಡಾ. ಅಂಬೇಡ್ಕರ್ ಸ್ಮಾರಕ ಭವನದ ಆವರಣದಲ್ಲಿ 2567ನೇ ಬುದ್ದ ಪೂರ್ಣಿಮಾ ಅಂಗವಾಗಿ ಏರ್ಪಡಿಸಲಾಗಿದ್ದ ಭಾರಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡುತ್ತಾ, ಭಗವಾನ ಬುದ್ದರು ಭೋದಿಸಿದ ಸತ್ಯ ಮತ್ತು ಅಹಿಂಸಾ ದಯಾ-ಕರುಣೆ ಮಾರ್ಗದಲ್ಲಿ ನಡೆಯಿರಿ. ಸತ್ಯದ ಪರವಾಗಿ ಮತದಾನವನ್ನು ಮಾಡಿರಿ ಎಂದರು.
ಸಭೆಯಲ್ಲಿ ನವಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಪೂಜ್ಯ ಭಂತೇ ಮಾತಾಜೀ, ಸೈಯ್ಯದ ಮಹೆಮೂದ ಸಾಹೇಬ, ಚಂದ್ರಸೇನ್ ಮೆನಗಾರ್, ಆಲಂಖಾನ್, ಶಂಕ್ರಯ್ಯಾಸ್ವಾಮಿ ಮದರಿ, ಸಾಹಿತಿ ಎಸ.ಪಿ ಸುಳ್ಳ್ಯದ, ಸಾಲೋಮನ್ ರಾಜಣ್ಣ, ನಾಗೇಂದ್ರ ಜೈಗಂಗಾ, ಕೃಷ್ಣಪ್ಪ ಕರ್ಣಿಕ, ಸೂರ್ಯಕಾಂತ ರದ್ದೇವಾಡಗಿ, ಶರಣಬಸ್ಸು ಶಿರೂರಕರ್, ಶಮಷೇರ ಅಹ್ಮೆದ, ನಾಸೀರ ಹುಸೇನ್, ರವಿ ಕೊಳಕೂರ ಸೇರಿದಂತೆ ಅನೇಕರು ಇದ್ದರು.