ವಾಡಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು

ಕಲಬುರಗಿ.ಅ.28: ಹಾವು ಕಚ್ಚಿ ಮಹಿಳೆಯೊಬ್ಬಳು ಅಸುನೀಗಿದ ಘಟನೆ ಜಿಲ್ಲಯ ಚಿತ್ತಾಪೂರ್ ತಾಲ್ಲೂಕಿನ ವಾಡಿಯಲ್ಲಿ ವರದಿಯಾಗಿದೆ. ಮೃತಳನ್ನು ನಾಗಮ್ಮ ಭೋವಿವಡ್ಡರ್ (55) ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ ಪರಿಣಾಮ ಮಹಿಳೆಯು ತೀವ್ರ ಅಸ್ವಸ್ಥಗೊಂಡಳು. ಕೂಡಲೇ ಆಕೆಯನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆರೋಗ್ಯದಲ್ಲಿ ಯಾವುದೇ ಚೇತರಿಕೆಯಾಗಿಲ್ಲದ ಕಾರಣ ವೈದ್ಯರ ಸೂಚನೆಯಂತೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಮಹಿಳೆ ಸಾವನ್ನಪ್ಪಿದಳು ಎಂದು ತಿಳಿದುಬಂದಿದೆ. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.