ವಾಡಿಯಲ್ಲಿ ವಾರಾಂತ್ಯ ಕಠಿಣ ಕಫ್ರ್ಯೂ

ವಾಡಿ: ಎ.24:ಕೋವೀಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲ್ಲೆ ಶನಿವಾರ ಮತ್ತು ರವಿವಾರ ವಾರಾಂತ್ಯ ಕಫ್ರ್ಯೂ ರಾಜ್ಯ ಸರ್ಕಾರ ಘೋಷಿಸಿದ್ದು, ಜನರು ಸಹಕಾರ ನೀಡಿದ್ದು ಕಂಡು ಬಂತು.

ಚಿತ್ತಾಪೂರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಎಂದಿನಂತೆ ಬೆಳಗ್ಗೆಯಿಂದ ಎನ್‍ಇಕೆಎಸ್‍ಆರ್‍ಟಿಸಿ ಬಸ್ ರಸ್ತೆಗೆ ಇಳಿದವು ಆದರೆ, ಜನ ಮಾತ್ರ ಕಂಡು ಬರಲ್ಲಿಲ್ಲ. ಯಾದಗಿರಿಯಿಂದ- ಕಲಬುರಗಿಗೆ ಹೋಗುವ ಬಸ್ಸಿನಲ್ಲಿ 10 ಜನಪ್ಯಾಸೆಂಜರ್ ಇದ್ದರೇ, ಕಲಬುರಗಿಯಿಂದ ಯಾದಗಿರಿಗೆ ತೆರಳುವ ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡು ಬಂತು.

ಅಗತ್ಯ ವಸ್ತುಗಳ ಅಂಗಡಿಗಳು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಸಿಪಿಐ ಕೃಷ್ಣಪ್ಪ ಕಲ್ಲದೇವರು ಬೆಳಗ್ಗೆ ವಾಡಿ ಹಾಗೂ ಸುತ್ತಲ್ಲಿನ ಗ್ರಾಮಗಳಿಗೆ ಭೇಡಿ ನೀಡಿದರು. ಕಠಿಣ ನಿಯಮ ಪಾಲಿಸುವಂತೆ ಅಧೀನ ಅಧಿಕಾರಿಗಳಿಗೆ ನಿರ್ದಶನ ನೀಡಿದರು.

ಲೀಕರ್‍ಶಾಫ ಲಾಕ್: ಪಟ್ಟಣದಲ್ಲಿರುವ ಎಂಟು ಬಾರ್ ಆಂಡ್ ರೇಸ್ಟೋರೆಂಟ್ ಅಂಗಡಿಗಳಿಗೆ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ ದೊಡ್ಮನಿ, ಸುಭಾಷ ಜೋಗಿ ಲಾಕ್ ಮಾಡಿ ಸೀಲ್ ಹಾಕಿದರು. 57 ಗಂಟೆಗಳ ನಂತರ ಸೋಮವಾರ ಬೆಳಗ್ಗೆ ತೆರೆಯಲ್ಲಿವೆ ಎಂದರು.

ರೇಲ್ವೇ: ವಾಡಿ(ಜಂಕ್ಷನ) ಎಂದೇ ಪ್ರಸಿದ್ದವಾಗಿರುವ ಪಟ್ಟಣದ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಲೋಕಮಾನ್ಯ ತೀಲಕ್-ಮುಂಬೈ ಮಧುರೈ ಟ್ರೈನ್ ಬೊಗಿಯಲ್ಲಿ ಅತ್ಯಂತ ಕಡಿಮೆ ಪ್ರಯಾಣಿಕರು ಇದ್ದಿದ್ದು ಕಂಡು ಬಂತು. ಆದರೆ, ಮಾಸ್ಕ್ ಇಲ್ಲದೇ ಜನರ ಓಡಾಟ ಸಾಮನ್ಯವಾಗಿತ್ತು.

ಜನರ ಆಕ್ರೋಶ: ಏಕಾ-ಏಕಿಯಾಗಿ ಕಠಿಣ ನಿಯಮ ಜಾರಿಗೊಳಿಸುವುದರಿಂದ, ಮುಂಚಿತವಾಗಿ ಹಮ್ಮಿಕೊಂಡ ಮಧುವೆಯಂತಹ ಸಮಾರಂಭಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಮದುವೇ ಕಾರ್ಯಕ್ಕೆ 50 ಜನ ನಿಯಮದಿಂದ ಅವಿಭಕ್ತ ಕುಟುಂಬಗಳು ತೊಂದರೆಯಲ್ಲಿ ಸಿಲುಕಿಕೊಂಡಂತಿದೆ. ಯಾವುದೇ ಪರಿಹಾರ ಘೋಷಣೆ ಮಾಡದೇ ಇರುವುದು ಕೂಡಾ ಸಾರ್ವಜನಿಕರಿಂದ ವ್ಯಾಪಕ ವಿರೋಧ ಕೂಡಾ ಉಂಟಾಗುತ್ತಿದೆ. ಆದರೂ, ಸರ್ಕಾರದ ನಿಯಮಕ್ಕೆ ಜನರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ನಾಗರೀಕರು.