ವಾಡಿಕೆಗಿಂತ ಹೆಚ್ಚಾದ ಮಳೆ ಪ್ರಮಾಣ; ಬಿತ್ತನೆಯತ್ತ ರೈತರು

ಜಗಳೂರು.ಮೇ.೨೮; ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ೬೪ ಮಿ.ಮಿ ಮಳೆ ಪ್ರಮಾಣ ನಿರೀಕ್ಷೆ ಇತ್ತು ಆದರೆ ಈವರೆಗೆ ೭೨ ಮಿ.ಮಿ ಮಳೆಯಾಗಿದ್ದು  ವಾಡಿಕೆಗಿಂತ ಶೇ ೧೪% ಮಳೆ ಪ್ರಮಾಣ ಹೆಚ್ಚಾಗಿದೆ ರೃತರು ತಮ್ಮ ಹೊಲ ಗದ್ದೆಗಳನ್ನ ಹಸನು ಮಾಡಿಕೊಂಡಿದ್ದು ಮುಂದಿನ ವಾರದಲ್ಲಿ ಬಿತ್ತನೆ ಪ್ರಾರಂಭ ವಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು ಹೇಳಿದರು

ಪಟ್ಟಣದ ಕೃಷಿಇಲಾಖೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು  ತಾಲ್ಲೂಕಿನಲ್ಲಿ ೫೪ ಸಾವಿರ ಹೆಕ್ಟೇರ್ ಬಿತ್ತನೆ ಗುರಿಇದ್ದು ಇದರಲ್ಲಿ ಕಸಭಾ ಹೋಬಳಿ ೨೨ ಸಾವಿರ ಹೆಕ್ಟೇರ್ ಬಿಳಿಚೋಡು ೧೪೯೬೭ ಹೆಕ್ಟೇರ್ ಸೊಕ್ಕೆ-ಹೊಸಕೆರೆ ಹೋಬಳಿ ೧೭೦೧೧ ಹೆಕ್ಟೇರ್ ಬಿತ್ತನೆ ಪ್ರಮಾಣ ಇದೆ ಮುಂಗಾರು ಹಂಗಾಮಿ ಬಿತ್ತನೆಗೆ ಬೇಕಾದ ಅಗತ್ಯ ಬಿತ್ತನೆ ಬೀಜ ರಸಗೊಬ್ಬರ ಔಷದಗಳ ದಾಸ್ತಾನು ಸಂಗ್ರಹವಾಗಿದೆ ಇನ್ನು ಎರಡು ದಿನಗಳಲ್ಲಿ ರೈತರಿಗೆ ವಿತರಿಸಲಾಗುವುದು
ಕೊರೊನಾ ಲಾಕ್ ಡೌನ್ ನಿಯಮ ಪಾಲಿಸಿ ಸಾಮಾಜಿಕ ಅಂತರದಲ್ಲಿ ವಿತರಿಸಲಾಗುವುದು. ಬಿತ್ತನೆ ಬೀಜ ರಸಗೊಬ್ಬರ ಔಷದ ವಿತರಿಸಲು ತಾಲ್ಲೂಕಿನಾಧ್ಯಂತ ಎಂಟು ವಿತರಣ ಕೇಂದ್ರಗಳನ್ನ ತೆರೆಯಲಾಗಿದೆ ಕಸಬಾ ಹೋಬಳಿಯಲ್ಲಿ ಎ.ಪಿ.ಎಂ.ಸಿ.ಆವರಣದಲ್ಲಿ ಎರಡು ಘಟಕ ಬಿಳಿಚೋಡು ಹೋಬಳಿಯಲ್ಲಿ ಆರ್.ಎಸ್.ಕೆ ಹಾಗು ಹಾಲೇಕಲ್ ಸಹಕಾರ ಸೊಸೈಟಿ ಪಲ್ಲಾಗಟ್ಟೆ ಕೊಂಡುಕುರಿ ಸಂರಕ್ಷಣ ಕೇಂದ್ರ ಗಳಲ್ಲಿ ವಿತರಿಸಲಾಗುವುದು.  ಗರಿಷ್ಠ  ಐದು ಎಕರೆವರೆಗೆ ಒಬ್ಬ ರೈತರಿಗೆ ವಿತರಿಸಲಾಗುವುದು ಕಡ್ಡಾಯವಾಗಿ  ಆಧಾರ್  ಕಾರ್ಡ್ ತರಬೇಕು ಎಂದು ಮಾಹಿತಿ ನೀಡಿದರು  ಎಲ್ಲಾ ಗೊಬ್ಬರ ಅಂಗಡಿಗಳ ಮುಂಭಾಗ ರೈತರಿಗೆ ಕಾಣುವಂತೆ ರದ ಪಟ್ಟಿ ಹಾಕಬೇಕು ಎಂದು  ರಿಟೇಲ್ ದಾರರಿಗೆ ತಿಳಿಸಲಾಗಿದೆ ಇದಲ್ಲದೆ ಮುಂಗಾರು ಹಂಗಾಮಿ ಬೆಳಿಗಳಿಗೆ ಅಗತ್ಯ ಔಷದ ಸಂಗ್ರಹ ಕೂಡ ಇದೆ ರೈತರು ಅಕ್ಕಡಿ ಬೆಳೆಗೆ ಆದ್ಯತೆ ನೀಡಬೇಕು ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿವಂತೆ ಮನವಿ ಮಾಡಿದ್ದಾರೆ