ವಾಜಪೇಯಿ ಜೂಲಾಜಿಕಲ್ ಪಾರ್ಕ್‍ನಲ್ಲಿ ಸಫಾರಿ ವಾಹನ

ಹೊಸಪೇಟೆ ಏ16: ಕಮಲಾಪುರದ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ನಲ್ಲಿ ಜಿಲ್ಲಾ ಖನಿಜ ನಿಧಿಯಿಂದ ಪ್ರವಾಸಿಗರ ನೂತನ ಸಫಾರಿ ವಾಹನ ಸೇರಿ ಮೂರು ವಾಹನಗಳನ್ನು ಸಚಿವ ಆನಂದ್‍ಸಿಂಗ್ ಗುರುವಾರ ಸಂಚಾರಕ್ಕೆ ಮುಕ್ತಗೊಳಿಸಿದರು.
ಚಾಲನೆಯ ನಂತರ ಅಧಿಕಾರಿಗಳೊಂದಿಗೆ ಸಂವಾದ ಮಾಡಿದ ಅವರು ಪಾರ್ಕ್‍ನಲ್ಲಿ ಸಫಾರಿ, ಜೂ ನಲ್ಲಿ ನಾನಾ ಪ್ರಾಣಿಗಳನ್ನು ಪರಿಶೀಲಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದರು.
ಡಿಎಫ್‍ಒ ಸಿದ್ದರಾಮೇಶ್ವರ, ಜೂ ಡಿಎಫ್‍ಒ ಕಿರಣ್ ಕುಮಾರ್, ಕಮಲಾಪುರ ಪಪಂ ಮುಖ್ಯಾಧಿಕಾರಿ ಸಯ್ಯದ್ ಅಮಾನುಲ್ಲ, ಮುಖಂಡ ಧಮೇಂದ್ರ ಸಿಂಗ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.