ವಾಜಪೇಯಿ ಜನ್ಮದಿನ ಬಿಜೆಪಿಯಿಂದ ರೈತರಿಗೆ ಸನ್ಮಾನ

ಬಳ್ಳಾರಿ ಡಿ : ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿಯ ರೈತ ಮೋರ್ಚಾದಿಂದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ರೈತರ ದಿನಾಚರಣೆಯನ್ನಾಗಿ ಆಚರಿಸಿ ಹಲವು ಜನ‌ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ರೈತರಾದ ತಿಪ್ಪಣ್ಣ, ಪಾಂಡುರಂಗರೆಡ್ಡಿ, ಹನುಮಂತಪ್ಪ, ವಸಿಗೇರಿ, ತಿಪ್ಪೆಸ್ವಾಮಿ, ಮತ್ತು ಮರೇಗೌಡ ಅವರನ್ನು ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಘಟಕದ ಅಧ್ಯಕ್ಷ ಹಲಕುಂದಿ‌ ಮಲ್ಲಿಕಾರ್ಜುನಗೌಡ, ಮಾಜಿ‌ ಮೇಯರ್ ಇಬ್ರಾಹಿಂ ಬಾಬು‌ ಮೊದಲಾದವರು ಸನ್ಮಾನಿಸಿ ಗೌರವಿಸಿದರು.
ವಾಜಪೇಯಿ ಅವರ ಜೀವನದ ಸಾಧನೆಗಳನ್ನು‌ಸ್ಮರಿಸಿದ ಮುಖಂಡರು. ಇಂದಿನ ಪ್ರಧಾನಿ‌ ವಾಜಪೇಯಿ ಅವರಂತೆ ರೈತಪರ ಕಾಳಜಿ ಉಳ್ಳವರಾಗಿದ್ದಾರೆ. ದೇಶದ ಬಡ ರೈತನ‌ಪ್ರತಿ‌ ಕುಟುಂಬಕ್ಕೆ ಇಂದು‌ಎರೆಡು ಸಾವಿರ ರೂಪಾಯಿಗಳನ್ನು ಅವರಿಗೆ ನೆರವಾಗಲಿ ಎಂದು‌ ನೇರವಾಗಿ‌ ಅವರ ಖಾತೆಗೆ ಹಣ ಜಮಾ ಮಾಡಿದ್ದಾರೆಂದು‌ ಹೇಳಿದರು. ಇದೇ ರೀತಿ ವಾರ್ಷಿಕ ಆರು ಸಾವಿರ ರೂಪಾಯಿ ನೀಡುತ್ತಿದ್ದು. ರಾಜ್ಯ ಸರ್ಕಾರ ಇದಕ್ಕೆ ಹೆಚ್ವುವರಿಯಾಗಿ ನಾಲ್ಕು ಸಾವಿರ ರೂಪಾಯಿ‌ ನೀಡುತ್ತಿದೆ ಎಂದು ತಿಳಿಸಿದರು.