ವಾಕ್ ಮತ್ತು ಶ್ರವಣದೋಷವುಳ್ಳ ವಿಕಲಚೇತನರಿಂದ ಮತದಾನ ಜಾಗೃತಿ

ಸಂಜೆವಾಣಿ ವಾರ್ತೆ
ದಾವಣಗೆರೆ ಮೇ ೨; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕಿವುಡರ ಸಂಘ, ಇವರುಗಳ ವತಿಯಿಂದ ನಗರದ ಜಯದೇವ ಸರ್ಕಲ್‍ನಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ವಿಕಲಚೇತನರಿಂದ ಹಮ್ಮಿಕೊಂಡ ಮತದಾನ ಜಾಗೃತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸುರೇಶ್ ಬಿ. ಇಟ್ನಾಳ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕ ಇಲಾಖೆ ಉಪನಿರ್ದೇಶಕ ಕೆ.ಕೆ. ಡಾ. ಪ್ರಕಾಶ್, ಕಿವುಡ ಸಂಘದ ಅಧ್ಯಕ್ಷ ಆಸಿಫ್ , ಕಿವುಡ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಪಿ ರಾಜಶೇಖರ್, ಸಂಜ್ಞಾ ಭಾಷಾ ತರ್ಜುಮೆದಾರರು ಜೆ. ದುರ್ಗೇಶ್, ಯು.ಆರ್.ಡಬ್ಲ್ಯೂ. ಮಂಜುನಾಥ  ಭಾಗವಹಿಸಿದ್ದರು