ವಾಕ್ ಟು ವಾರ್ಡ್: ಶಾಲೆಗೆ ನೀರಿನ ಟ್ಯಾಂಕರ್ ಮಾಡಿಸಿಕೊಡುವೆ – ಮುಜೀಬುದ್ದೀನ್

ರಾಯಚೂರು, ನ.೧೨- ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಿಟ್ಟಿಮಲ್ಕಾಪುರು ಮತ್ತು ದೇವನಪಲ್ಲಿ ಗ್ರಾಮಗಳಲ್ಲಿನ ಶಾಲೆಯ ಸಮಸ್ಯೆಗಳನ್ನು ಕೂಡಲೇ ಬಗೆಹರಿವುದಾಗಿ ಕಾಂಗ್ರೆಸ್ ಮುಖಂಡ ಮುಜೀಬುದ್ದೀನ್ ಭರವಸೆ ನೀಡಿದರು.
ಇಂದು ವಾಕ್ ಟು ವಾರ್ಡ್ ಅಭಿಯಾನದ ಪ್ರಯುಕ್ತ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಿಟ್ಟಿ ಮಲ್ಕಾಪೂರು ಮತ್ತು ದೇವನಂಪಲ್ಲಿ ಗ್ರಾಮಗಳಲ್ಲಿ ನಡೆದ ವಾಕ್ ಟು ವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.ವಾಕ್ ಟು ವಾರ್ಡ್ ಅಭಿಯಾನದ ಪ್ರಯುಕ್ತ ಎರಡಯ ಗ್ರಾಮದ ನಿವಾಸಿಗಳ ಮನೆ- ಮನೆಗೆ ಭೇಟಿ ನೀಡಿ ಸಮಸ್ಯೆಗಳುನ್ನು ಆಲಿಸಿದರು.ಮಿಟ್ಟಿ ಮಲ್ಕಾಪೂರು ಗ್ರಾಮದ ಸರ್ಕಾರಿ ಶಾಲೆಗೆ ಕೊರತೆ ಇರುವ ನೀರಿನ ಟ್ಯಾಂಕರ್ ಕಟ್ಟಿಸಿಕೊಡುತ್ತೇನೆ ಎಂದು ಭರಸವೆ ನೀಡಿ ನಾಳೆಯಿಂದಲೇ ಕೆಲಸ ಪ್ರಾರಂಭಿಸುತ್ತೇನೆ ಎಂದರು. ಸ್ವಚ್ಚತೆ,ಯುಜಿಡಿ,ತುಂಬೆಲ್ಲ ಕಸದ ರಾಶಿ ಇದೆ. ವಿದ್ಯುತ್ ದೀಪಗಳು ಕೊರತೆ ಇದೆ.ಯುಜಿಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ.ಶೌಚಾಲಯ ಸಮಸ್ಯೆ ಇದ್ದು ಇದನ್ನು ಬಗೆಹರಿಸುತ್ತೇನೆ ಎಂದ ಅವರು, ನೀರಿನ ನಳ,ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಿಟ್ಟಿಮಲ್ಕಾಪೂರುದ ಗ್ರಾಮ ಪಂಚಾಯತಿ ಸದಸ್ಯರಾದ ಭೀಮೇಶ್,ಮಲ್ಲೇಶ್, ಮುಖಂಡರಾದ ಖಾಜಾ,ನರಸಿಂಹ ಟ್ಯಾಕ್ಟರ್,ನಾಗರಾಜ್,ಉಸ್ಮಾನ್, ಜೆ.ಸಿ.ಹನುಮಂತ,ದೊಡ್ಡ ನರಸಿಂಹಲು,ನಲ್ಲಾರೆಡ್ಡಿ,ಶಾಲಂ,ವೆಂಕಟೇಶ್, ಮಾರುತಿ,ಎಂ.ಸುರೇಶ್,ಕೆ.ಆಂಜನೇಯ, ಡ್ರೈವರ್ ವೆಂಕಟೇಶ,ಹುಸೇನ್ ಪಾಶಾ,ಖಾದರ್ ಪಾಷಾ,ಮೌಲಾ,ಕೆ.ಕೃಷ್ಣಪ್ಪ,ಭಾಷಾ ದೇವನಂಪಲ್ಲಿ ನಿವಾಸಿಗಳಾದ ಪ್ರತಾಪ್ ರೆಡ್ಡಿ, ವೆಂಕಟೇಶ,ವಿರೇಶ್,ಬಿ.ಗೋಪಿ, ದೇವೇಂದ್ರಪ್ಪ,ಮಲ್ಲಯ್ಯ,ನರಸಯ್ಯ ,ರಾಜೇಶ್.ಕೆ ಸೇರಿದಂತೆ ಅನೇಕರು ಇದ್ದರು.